ಶಾಸಕ ಪ್ರಸಾದ್ ಅಬ್ಬಯ್ಯ್ ವಿರುದ್ದ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು. ಅಕ್ರಮ ಪೌಷ್ಠಿಕ ಆಹಾರ ಕಳ್ಳತನ ಕೈ ನಾಯಕಿಯ ಬಂಧನ ಎವಾಗ?

ಅಂಗನವಾಡಿ ಮಕ್ಕಳ ಆಹಾರ ಕಳ್ಳತನ ಪ್ರಕರಣದಲ್ಲಿ ಪ್ರಮುಖ ಇಬ್ಬರು ಆರೋಪಿಗಳನ್ನು ಬಂಧನ ಮಾಡದ ಪೊಲೀಸರ ವಿರುದ್ಧ ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿಯ ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು
ಕಳೆದ ಹತ್ತು ದಿನಗಳಿಂದ ಹುಬ್ಬಳ್ಳಿಯ ಹಳೆ ಗಬ್ಬೂರಿನಲ್ಲಿ ಅಪಾರ ಪ್ರಮಾಣದಲ್ಲಿ ಅಂಗನವಾಡಿ ಮಕ್ಕಳ ಆಹಾರ ಬ್ಯಾಗ್ ಗಳು ಪತ್ತೆಯಾಗಿದ್ದವು ಆದ್ರೆ ಅಕ್ರಮವಾಗಿ ಪೌಷ್ಠಿಕ ಆಹಾರ ಗೋದಾಮಿನಲ್ಲಿ ಸಂಗ್ರಹಿಸಿದ್ದ ಬತೂಲಾ ಕಿಲ್ಲೆದಾರ ಮತ್ತು ಫಾರೂಕ್ ಕಿಲ್ಲೆದಾರ ಅವತ್ತಿನಿಂದ ತೆಲೆ ಕರೆಸಿಕೊಂಡಿದ್ದು ಇನ್ನು ಪೊಲೀಸರು ಬಂಧಿಸದೆ ಇದ್ದಿದರಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯೆಕ್ತಪಡಿಸಿದರು.
ಇನ್ನು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧನ ಮಾಡದಂತೆ ಶಾಸಕ ಪ್ರಸಾದ್ ಅಬ್ಬಯ್ಯ ಪೊಲೀಸರ ಮೇಲೆ ಒತ್ತಡ ಹಾಕ್ತಾ ಇದ್ದಾರೆಂದು ಆರೋಪಿಸಿ ಶಾಸಕ ಪ್ರಸಾದ್ ಅಬ್ಬಯ್ಯ್ ವಿರುದ್ಧ ಘೋಷಣೆ ಕೂಗಿದರು ಇನ್ನು ಈ ಒಂದು ಪ್ರತಿಭಟನೆಯಲ್ಲಿ ಮಂಜು ಕಾಟಕರ್ . ಅನುಪ ಬಿಜವಾಡ. ಅಣ್ಣಪ್ಪಾ ಗೋಕಾಕ. ಶಶಿಕಾಂತ ಬಿಜವಾಡ. ನಾರಾಯಣ ಜರ್ತಾರಕರ ರಾಜು ಜರ್ತಾಕರ ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿ ಆಗಿದ್ದರು