ಇನ್ಸಪೆಕ್ಟರ ಶ್ರೀಶೈಲ ಕೌಜಲಗಿ ಟೀಮ್ ಬಲೆಗೆ ಬಿದ್ದ ಚಾಲಾಕಿ ಕಳ್ಳ. 1 ಲಕ್ಷ 20 ಸಾವಿರ ಮೌಲ್ಯದ ಬೈಕಗಳು ವಶ.

ಕಳೆದ ಕೆಲವು ದಿನಗಳ ಹಿಂದೆ ಹುಣಸಿಕಟ್ಟಿ ಗ್ರಾಮದಲ್ಲಿ ಬೈಕ ಕಳ್ಳತನ ನಡದಿತ್ತು. ಇನ್ನು ಪ್ರಕರಣ ದಾಖಲಿಸಿಕೊಂಡ ಕಲಘಟಗಿ ಠಾಣೆಯ ಪೊಲೀಸರು ಕಳ್ಳರ ಪತ್ತೆಗಾಗಿ ಜಾಲ ಬಿಸಿದ್ದು ಕೊನೆಗು ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇನ್ಸಪೆಕ್ಟರ ಶ್ರೀಶೈಲ್ ಕೌಜಲಗಿ ಅವರ ಮಾರ್ಗದರ್ಶನದಲ್ಲಿ ಪಿ ಎಸ್ ಐ ಕರೀವಿರಪ್ಪನವರ ನೇತೃತ್ವದಲ್ಲಿ ಒಬ್ಬ ಬೈಕ ಕಳ್ಳನನ್ನು ಬಂಧಿಸಿ ಆತನಿಂದ ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ಮೌಲ್ಯದ ಎರಡು ಬೈಕಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಈ ಒಂದು ಕಾರ್ಯಾಚರಣೆಯಲ್ಲಿ ಎ ಎಸ್ ಐ ಡಿ ಬಿ ಪಾಟೀಲ. ಸಿಬ್ಬಂದಿಗಳಾದ ಮಾಂತೇಶ ನಾನಗೌಡ. ಹುಸೇನ್ ಎಲಿಗಾರ. ಗೋಪಾಲ ಪಿರಗಿ. ಪ್ರವೀಣ್ ಅಂಗಡಿ. ಮಲ್ಲಿಕಾರ್ಜುನ ಸಜ್ಜನ. ಹಾಗು ಯಶವಂತ ಭಾಗವಹಿಸಿದ್ದು ಇವರ ಕಾರ್ಯಾಚರಣೆಗೆ ಎಸ್ ಪಿ ಬ್ಯಾಕೋಡ ಅವರು ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ.