NewsUncategorizedಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಅಂತರ ರಾಜ್ಯ್ ಕಳ್ಳರನ್ನು ಬಂಧಿಸಿದ್ದಾರೆ

ಕಳೆದ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯ ಶಹರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ಅಂಗಡಿಗಳ ಶಟರ ಮುರಿದು ಕಳ್ಳತನ ಮಾಡಿದ್ದ ಚಾಲಾಕಿ ಕಳ್ಳರನ್ನು ಶಹರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಕಳ್ಳರು ತಮಿಳುನಾಡು ಮೂಲದ ವೇಲೊರು ಗ್ರಾಮದ ರಕ್ಷಿತ, ಪಾವಗಡ ನಿವಾಸಿ ಆದ ನಿತಿನ್, ಮಂಜು ಅಲಿಯಾಸ ಡಾಲಿ ಹಾಗು ಅರುಣ ಹೊಸಪೇಟೆ ನಿವಾಸಿಗಳು . ಎಂದು ತಿಳಿದು ಬಂದಿದೆ. ಸಿಕ್ಕ ಎಲ್ಲರು ಅಂತರ ರಾಜ್ಯ ಕಳ್ಳರು ಇದ್ದಿದ್ದು ಇವರ ಮೇಲೆ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಅಂತೊ ಚಾಲಾಕಿ ಶಟರ ಮುರಿಯುವ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಯಶಸ್ವಿ ಆಗಿದ್ದಾರೆ ಇವರೆಲ್ಲರನ್ನು ನ್ಯಾಯಾಂಗ ಬಂದನಕ್ಕೆ ಒಳಪಡಿಸಲಾಗಿದೆ.

ಈ ಒಂದು ಕಾರ್ಯಾಚರಣೆಯಲ್ಲಿ ಠಾಣೆಯ ಇನ್ಸಪೇಕ್ಟರ ಆನಂದ ಒನಕುದರಿ ನೇತೃತ್ವದಲ್ಲಿ ಪಿ ಎಸ ಐ ಮಾರುತಿ, ಸಿಬ್ಬಂದಿಗಳಾದ ಸಂಗಪ್ಪಾ ಕಟ್ಟಿಮನಿ, ಗೋವಿಂದಪ್ಪ,ರಾಮರಾವ ರಾಠೋಡ,ರವಿ ಕೆಂದೂರ,ರಗಣಿ ಕಲ್ಲನಗೌಡರ,ರುದ್ರಪ್ಪಾ ಹೊರಟ್ಟಿ ಭಾಗವಹಿಸಿ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!