ಮಾನವೀಯತೆ ಮೆರೆದ psi ಶ್ರೀಮಂತ ಹುಣಸೀಕಟ್ಟಿ

ಬೈಕ್ ಸ್ಕಿಡ್ ಆಗಿ ಸವಾರನೊಬ್ಬ ಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ ಹುಬ್ಬಳ್ಳಿಯ ಕಿಮ್ಸ್ ಮುಂಭಾಗದ ಮುಖ್ಯ ರಸ್ತೆಯಲ್ಲಿ ಏಕಾಏಕಿ ನಡುರಸ್ತೆಯಲ್ಲೇ ಸ್ಕಿಡ ಆಗಿ ಗಂಭೀರ ಗಾಯಗೊಂಡ ಸುನೀಲ್ ಯಡ್ರಾವಿ.
ತಲೆಗೆ ಪೆಟ್ಟು ಬಿದ್ದ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಸಹಾಯ ಮಾಡಿದ ಸಬ್ ಇನ್ಸ್ ಪೆಕ್ಟರ್ ಶ್ರೀಮಂತ ಹುಣಸೀಕಟ್ಟಿಯವರು ಸ್ಥಳೀಯರಾದ ಶ್ರೀಧರ್ ಕಂದಗಲ್ ಸಹಾಯದಿಂದ ಬೈಕ್ ಸವಾರನನ್ನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ