ದನದ ಮಾಂಸ ಸಾಗಾಣಿಕೆ ವಿಷಯದಲ್ಲಿ ತಲವಾರು ಮಾರಕಾಸ್ತ್ರಗಳಿಂದ ಹಲ್ಲೆ

ಟ್ರಾನ್ಸಪೋರ್ಟ ವಿಷಯವಾಗಿ ಇಬ್ಬರು ಅಣ್ಣ ತಮ್ಮಂದಿರ ನಡುವೆ ಮಾರಕಸ್ತ್ರಗಳಿಂದ ಹೊಡೆದಾಡಿಕೊಂಡ ಘಟನೆ ಹಳೆ ಹುಬ್ಬಳ್ಳಿಯ ಕಟಗರ ಓಣಿಯಲ್ಲಿ ನಡೆದಿದೆ

ಜುನೇಜ ಮುಲ್ಲಾ ಹಾಗು ಉಮೇಜ ಮುಲ್ಲಾ ಇಬ್ಬರು ಸಂಬಂಧಿಕರು ಆದರೆ ದನದ ಮಾಂಸ ಸಾಗಾಣಿಕೆ ವಿಷಯದಲ್ಲಿ ಆಗಾಗ ಮಾತಿಗೆ ಮಾತು ಬೆಳೆದು ಜಗಳ ನಡೆಯುತ್ತಿತ್ತು

ಆದರೆ ಇಂದು ದನದ ಮಾಂಸ ಸಾಗಾಣಿಕೆ ವಿಷಯದಲ್ಲಿ ಮಾತಿಗೆ ಮಾತು ಬೆಳೆದು

ತಲ್ವಾರೂ ಹಾಗೂ ಮಾರಕಾಸ್ತ್ರಗಳಿಂದ ಜುನೇಜ್ ಮುಲ್ಲಾ ಬಾಬಾ ಸಾಧಿಕ್ ಸಹಿತ ಇನ್ನೂ ಏಳರಿಂದ ಎಂಟು ಜನರು ಉಮೇಜ್ ಮುಲ್ಲಾ ಹಾಗೂ ಆಮೆಜ್ ಮುಲ್ಲಾ ಸಹಿತ ಅಲ್ಲೇ ಇದ್ದ ಇನ್ನು ಮೂರು ನಾಲ್ಕು ಜನರ ಕಾಲಿಗೆ ಹಾಗೂ ಕೈಗೆ ತಲ್ವಾರೂ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದು

ಇನ್ನು ಹಲ್ಲೆಗೆ ಒಳಗಾದ ಎಲ್ಲರನ್ನು ಚಿಕಿತ್ಸೆಗಾಗಿ ಕಿಮ್ಸ್ ಗೆ ದಾಖಲಿಸಲಾಗಿದೆ

ಇನ್ನು ಸ್ಥಳಕ್ಕೆ ಆಗಮಿಸಿದ ಕಸಬಾ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ
