ಛೋಟಾ ಮುಂಬೈನಲ್ಲಿ ಅನ್ನಭಾಗ್ಯದ ಅಕ್ಕಿಯ ಹಿಂದೆ ಯಾರಿದ್ದಾರೆ ಗೊತ್ತಾ!!!!

ಛೋಟಾ ಮುಂಬೈ ಅಂತಾ ಕರೆಸಿಕೊಳ್ಳುವ ಹುಬ್ಬಳಿಯಲ್ಲಿ ಆಹಾರ ಕಳ್ಳರ ಹಾವಳಿ ಹೆಚ್ಚಾಗಿದೆ ಕಳೆದ ಕೆಲವು ದಿನಗಳ ಹಿಂದೆ ಅಂಗನವಾಡಿ ಪೌಷ್ಟಿಕ್ ಆಹಾರ ಕಳ್ಳತನ ಮಾಸುವ ಮುನ್ನವೆ ಪಡಿತರ ಅಕ್ಕಿ ಕಳ್ಳ ಸಾಗಾಟ ಮಾಡುತ್ತಿರುವಾಗಲೇ ಆಹಾರ ಇಲಾಖೆಯ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ ಆಗಿ ಸಿಕ್ಕ ಘಟನೆ ಹಳೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರ ಅಥವಾ ಅಕ್ರಮ ಕಳ್ಳ ಸಾಗಾಟಕ್ಕೆ ಸಾಥ ನೀಡುತ್ತಿದ್ದಾರಾ ಎಂಬ ಪ್ರೆಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಪ್ರತಿ ತಿಂಗಳು ರೇಶನ್ ಕೊಡುವ ದಿನದಿಂದ ಈ ತರಾ ಅಕ್ರಮ ಅಕ್ಕಿ ಸಾಗಟ್ ಆಟೋಗಳಲ್ಲಿ ನಡೆಯುತ್ತಿದ್ದರು ಕೂಡ ಅಧಿಕಾರಿಗಳು ತಮ್ಮ ಆಫೀಸಿನಲ್ಲಿ ಆರಾಮಾಗಿ ಟೈಮ್ ಪಾಸ್ ಮಾಡುತ್ತಾ ಕಾಲ ಹರಣ ಮಾಡುತ್ತಾರಾ ಎಂಬ ಪ್ರೆಶ್ನೆ ಆಹಾರ ಇಲಾಖೆಯ ಮೂಲೆ ಮೂಲೆಯಲ್ಲಿ ಹರಿದಾಡುತ್ತಿದೆ
ಹಳೆ ಹುಬ್ಬಳಿ ಭಾಗದಲ್ಲಿ ಅತೀ ಹೆಚ್ಚು ಅನ್ನಭಾಗ್ಯ ಅಕ್ಕಿ ಮಾರಾಟ ತುಂಬಾ ಜೋರಾಗಿ ನಡೆಯುತ್ತೆ. ನಿನ್ನೆ ಮಧ್ಯಾಹ್ನ ಮಹಿಳೆಯೊಬ್ಬಳು ಅಕ್ರಮವಾಗಿ ಸುಮಾರು 100ಕೆಜಿ ಅನ್ನಭಾಗ್ಯ ಅಕ್ಕಿ ಟಾಟಾ ಎಸ್ ನಲ್ಲಿ ತುಂಬಿಕೊಂಡು ಹೋಗುವ ಸಮಯದಲ್ಲಿ ಅಧಿಕಾರಿಗಳು ರೆಂಡ ಹ್ಯಾಂಡ ಆಗಿ ಹಿಡಿದು ಹಳೆ ಹುಬ್ಬಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಳಿಸಿದ್ದಾರೆ