ಅಂಗನವಾಡಿ ಶಿಕ್ಷಕಿಯ ನಡೆಸುತ್ತಿದ್ದ ಬಹುದೊಡ್ಡ ದಂಧೆ ಬಯಲು “Etv24×7” Exclusive ಸುದ್ದಿ

ಅಂಗನವಾಡಿ ಪೂರೈಕೆ ಆಗುವ ಪೌಷ್ಟಿಕ ಆಹಾರ ಕಾಳಸಂತೆಗೆ ಸಾಗಾಟ.ಅಂಗನವಾಡಿ ಶಿಕ್ಷಕಿಯ ನಡೆಸುತ್ತಿದ್ದ ಬಹುದೊಡ್ಡ ದಂಧೆ ಬಯಲು.ಬತೂಲ್ ಕಿಲ್ಲೆದಾರ್ ಅಂಗನವಾಡಿ ಶಿಕ್ಷಕಿ ನಡೆಸುತ್ತಿದ್ದ ಕಳ್ಳ ದಂಧೆಯ ಕರಾಮತ್ತು 300 ಚೀಲದಷ್ಟು ಆಹಾರ ಧಾನ್ಯಗಳು ಪತ್ತೆ.
ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಆಗಬೇಕಿದ್ದ ಆಹಾರ ಧಾನ್ಯ ಕದ್ದು ಖಾಸಗಿ ಗೋದಾಮಿಗೆ ಸಾಗಾಟ. Etv24×7 ನಡೆಸಿದ ಕಾರ್ಯಚರಣೆ ವೇಳೆ ಬಯಲಾಯ್ತು ಕರಾಳ ದಂಧೆ. ನೂರಾರು ಚೀಲ ಆಹಾರ ಧಾನ್ಯ ಕಳಸಂತೆಗೆ ಸಾಗಾಟ ಮಾಡಲು ಸಂಗ್ರಹಿಸುತ್ತಿದ್ದ ವೇಳೆ ದಾಳಿ.
ಹಳೇ ಹುಬ್ಬಳ್ಳಿ ಅಂಗನವಾಡಿ ಶಿಕ್ಷಕಿ ನಡೆಸುತ್ತಿದ್ದ ಕರಾಳ ಕಳ್ಳದಂದೆ ಬಯಲು. ಇನ್ನು ಗುಡಾನಿನಲ್ಲಿ ಸಂಗ್ರಹ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಅಧಿಕಾರಿಗಳು.ಗುಜರಿ ಸಂಗ್ರಹಿಸುವು ತೊಗರಿ ಬೇಳೆ, ಹೆಸರು ಕಾಳು, ಬೆಲ್ಲ, ಸಕ್ಕರೆ, ಗೋದಿಹಿಟ್ಟು, ದಾಳಿ ವೇಳೆ ಸಿಕ್ಕ ವಸ್ತುಗಳು.
ಇನ್ನು ಅಂಗನವಾಡಿ ಶಿಕ್ಷಕಿ ಬತೂಲಾ ಕಿಲ್ಲೇದಾರ್ , ಹಾಗು ಆಕೆಯ ಪತಿ ಫಾರೂಕ್ ಕಿಲ್ಲೆದಾರ್, ನಡೆಸುತ್ತಿದ್ದ ಅಕ್ರಮ ದಂಧೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ತಪ್ಪಿಸಿಕೊಂಡು ಓಡಿ ಹೋದ ಫಾರೂಕ್.
ಹುಬ್ಬಳ್ಳಿಯ ಹಳೆ ಗಬ್ಬೂರಿ ಗೋದಾಮಿನಲ್ಲಿ ಧಾನ್ಯದ ಒಂದು ಲೋಡ್ ಪ್ಯಾಕೆಟ್ ಹಾಗು ಗೋದಾಮಿನಲ್ಲಿ ಸಂಗ್ರಹಿಸಿದ್ದ 220 ಚೀಲ ಆಹಾರ ಧಾನ್ಯ. ಒಟ್ಟು 300ಕ್ಕೂ ಅಧಿಕ ಚೀಲ ಆಹಾರ ಧಾನ್ಯ ಪತ್ತೆ.
ಇನ್ನು ಸ್ಥಳಕ್ಕೆ ಎಸಿ ಶ್ಯಾಲಮ್ ಹುಸೆನ್ , ತಹಶಿಲ್ದಾರರ ಕಲ್ಲನಗೌಡಾ ಪಾಟೀಲ್. ಕಸಬಾ ಠಾಣೆ ಪೊಲೀಸ ಇನ್ಸಪೆಕ್ಟರ ರಾಘವೇಂದ್ರ ಹಳ್ಳೂರ.ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಡಾ. ಕಮಲಾ ಕುಕನೂರು ಭೇಟಿ. ದಾಳಿಯಲ್ಲಿ ಪತ್ತೆಯಾದ ಆಹಾರ ಪೊಟ್ಟಣ ಕಂಡ ದಂಗಾದ ಅಧಿಕಾರಿಗಳು. ತಾಯಿ ಕಾರ್ಡ್ ಹೊಂದಿದ ಬಾಣಂತಿಯ ಕೊಡಬೇಕಾದ ಹೆಸರು ಕಾಳು ದಾನ್ಯಗಳು ಸಹ ಪತ್ತೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸರು ಹಾಗು ಅಧಿಕಾರಿಗಳು.