ಅಕ್ರಮಕ್ಕೆ ಕೈ ಜೋಡಿಸಿದ್ರಾ ವಲಯ ನಂಬರ 9 ರ ಅಧಿಕಾರಿಗಳು ?

ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕೈಗೊಂಡ ಕಾಮಗಾರಿಗಳಿಂದ ಜನರು ಹೈರಾಣಾಗಿದ್ದಾರೆ. ಈ ನಡುವೆ ಪಾಲಿಕೆದವರು ಸಹಿತ ಯಾವುದೇ ಅನುಮತಿ ಇಲ್ಲದೆ ರಸ್ತೆಯನ್ನು ಅಗೆದು ಹಾಕಿ ಜನರಿಗೆ ಸಂಕಷ್ಟ ಕೊಡುತ್ತಿದ್ದಾರೆ.
ಮುಂದೆ ಮುಂದೆ ರಸ್ತೆ ಮಾಡೊದು ಹಿಂದೆ ಹಿಂದೆ ರಸ್ತೆಯಲ್ಲಿ ತೆಗ್ಗು ತಗೆಯೊದು ಹುಬ್ಬಳ್ಳಿಯಲ್ಲಿ ಸಿಕ್ಕ ಸಿಕ್ಕಲ್ಲಿ ರಸ್ತೆ ಮಧ್ಯದಲ್ಲಿ ತೆಗ್ಗು ತಗೆದರೂ ಹೇಳೊರಿಲ್ಲ ಕೇಳೊರಿಲ್ಲ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಹೊಸ ರಸ್ತೆ ಮಾಡೊದು ಹಿಂದೆ ರಸ್ತೆಯಲ್ಲಿ ತಗ್ಗು ತಗೆಯೊದು ಸಾರ್ವಜನಿಕರ ಹಣಕ್ಕೆ ಬೆಲೆನೇ ಇಲ್ವಾ.
ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ನಲ್ಲಿ ಹೊಸದಾಗಿ ಮಾಡಿದ ರಸ್ತೆಯಲ್ಲಿ ಮತ್ತೆ ಅನುಮತಿ ಇಲ್ಲದೇ ರಸ್ತೆಯಲ್ಲಿಯೆ ತೆಗ್ಗು ತಗೆದರು ಕೇಳೊರಿಲ್ಲ ಹೇಳೊರಿಲ್ಲ. ನಗರದ ಚೆನ್ನಮ್ಮಾ ಸರ್ಕಲ್ ನ ಜನತಾ ಬಜಾರ ಮುಖ್ಯರಸ್ತೆಯಲ್ಲಿ ಇತ್ತೀಚಿಗಷ್ಟೇ ಹೊಸದಾಗಿ ಮಾಡಲಾಗಿದ್ದ ರಸ್ತೆಯಲ್ಲಿ ಅನುಮತಿ ಇಲ್ಲದೇ ರಸ್ತೆಯಲ್ಲಿ ತೆಗ್ಗು ತಗೆದ ಪಾಲಿಕೆಯ ಸಿಬ್ಬಂದಿಗಳು ಹುಬ್ಬಳ್ಳಿಯಲ್ಲಿ ಏನು ಬೇಕಾದರೂ ಮಾಡಿದರೆ ನಡೆಯುತ್ತದೆ ಎಂಬೊದಕ್ಕೆ ಇದುವೆ ಸಾಕ್ಷಿ.

ಲಕ್ಷ ಲಕ್ಷ ರೂಪಾಯಿ ರಸ್ತೆ ಮಾಡಿದ ಬೆನ್ನಲ್ಲೇ ಮತ್ತೆ ರಸ್ತೆಯಲ್ಲಿಯೇ ತೆಗ್ಗು ತಗೆಯೊದು ಸಂಪರ್ಕ ಕೊರತೆಯಿಂದಾಗಿ ಸಾರ್ವಜನಿಕ ರಸ್ತೆಯಲ್ಲಿ ಏನು ಮಾಡಿದರೆ ನಡೆಯುತ್ತದೆ ಅನುಮತಿ ಇಲ್ಲದೇ ರಸ್ತೆಯಲ್ಲಿ ತೆಗ್ಗು ತಗೆದರು ಜಾಣ ಕುರುಡುತನ ಹಾಗೆ ವಲಯ 9 ರ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಪಾಲಿಕೆಯ ಆಯುಕ್ತರೇ ಇದೇನಿದು ಸಾರ್ವಜನಿಕರ ತೆರಿಗೆ ಹಣ ಹೀಗೆ ಬಳಸೋದಾ ಇದನ್ನು ಪ್ರಶ್ನೆ ಮಾಡಿದರೆ ಪಾಲಿಕೆಯ ಅಧಿಕಾರಿಗಳಾದ ಕಟಗಿ,ತಂಬೋರೆ ಯವರಿಂದ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ .

ಇನ್ನು ರಸ್ತೆ ಅಗೆದು ನಾಲ್ಕು ದಿನಾ ಆದರು ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡದೆ ಕುಳತ್ತಿರುವುದು ಕಂಡರೆ ಗೊತ್ತಾಗುತ್ತೆ ಇದರಲ್ಲಿ ಅಕ್ರಮ ವಾಸನೆ ಮೂಡುತ್ತಿದ್ದ ಅಂತಾ ಸಾರ್ವಜನಿಕರಲ್ಲಿ ಪ್ರೆಶ್ನೆ ಮೂಡುತ್ತಿದೆ.ಪಾಲಿಕೆಯ ಆಯುಕ್ತರೆ ಇದ್ಕೆ ಉತ್ತರಿಸಬೇಕಿದೆ.