ಹುಬ್ಬಳ್ಳಿಯಲ್ಲಿ ಮಿತಿ ಮೀರಿದ ಅನ್ನಭಾಗ್ಯ ಅಕ್ಕಿಕಳ್ಳರ ಹಾವಳಿ…….

ಸರ್ಕಾರ ಬಡವರಿಗೆ ನೀಡುತ್ತಿರುವ ಅನ್ನಭಾಗ್ಯ ಅಕ್ಕಿಗೆ ಅಕ್ಕಿಕಳ್ಳರ ಕಣ್ಣು ಬಿದಿದ್ದು, ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಬಲು ಜೋರಾಗಿದೆ ನಡೆಯುತ್ತಿದೆ.
ಹುಬ್ಬಳ್ಳಿಯ ಗಲ್ಲಿ ಗಲ್ಲಿಯಲ್ಲಿ ಅನ್ನಭಾಗ್ಯ ಅಕ್ಕಿ ಕಳ್ಳತನ ಜೋರಾಗಿದ್ದರು ಸಹ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಸಣ್ಣಪುಟ್ಟ ಅಕ್ಕಿ ಸಾಗಾಟವವರನ್ನು ಮಾತ್ರ ಹಿಡಿದು ಕೆಸ ಮಾಡುತ್ತಿದ್ದಾರೆಂದು ಜನರು ಆರೋಪಿಸುತ್ತಿದ್ದಾರೆ.
ಹುಬ್ಬಳ್ಳಿಯ ಗಣೇಶ ಪೇಟೆಯ ವಡ್ಡರ ಓಣಿಯಲ್ಲಿ ಸುಮಾರು 4 ಕ್ವಿಂಟಲ್ ಅಕ್ಕಿಯನ್ನು ಆಹಾರ ಇಲಾಖೆಯ ಅಧಿಕಾರಿ ಖತೀಬ್ ಹಾಗೂ ಶಹರ ಪೊಲೀಸ್ ಠಾಣೆಯ ಪೊಲೀಸರು ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ..
ಹೀಗೆ ಸಣ್ಣಪುಟ್ಟ ಪ್ರಮಾಣದಲ್ಲಿ ಸಂಗ್ರಹವಾದ ಅಕ್ಕಿ ಬಳಿಕ ಅಕ್ರಮವಾಗಿ ಯಾರ ಗೋಡಾನನಲ್ಲಿ ಸೇರುತ್ತೆ ಅಂತಾ ಆಹಾರ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ವಾ? ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಅಕ್ಕಿ ರಾಜರು ಅಂತಾನೇ ಕರೆಸಿಕೊಳ್ಳುವ ಮಂಜುನಾಥ ಸ್ವಾಮಿ ಹಾಗೂ ಸಚಿ +ನ್ ಸ್ವಾಮಿ ಇವರ ಗೋದಾಮಿಗೆ ಯಾಕೆ ಯಾವೊಬ್ಬ ಅಧಿಕಾರಿಗಳು ರೆಡ್ ಮಾಡುತ್ತಿಲ್ಲಾ? ಅಂತಾ ಸಾರ್ವಜನಿಕ ವಲಯದಲ್ಲಿ ಇದೀಗ ಚರ್ಚೆ ನಡೆಯುತ್ತಿದೆ.
ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಬಡವರ ಅಕ್ಕಿಗೆ ಕನ್ನ ಹಾಕು ದೊಡ್ಡ ತಿಮಿಂಗಿಲಗಳ ಬುಡಕ್ಕೆ ಕೈ ಹಾಕುವುದು ಯಾವಾಗ? ಅಥವಾ ಗೊತ್ತಿದ್ದು ಸಣ್ಣ ಪುಟ್ಟ ಕುಳಗಳಿಗೆ ಹಿಡಿದು ಮೇಲಾಧಿಕಾರಿಗಳನ್ನು ಮೆಚ್ಚಿಸುವ ಕೆಲಸ ನಡಿಯುತ್ತಿವೆಯೇ ಅಂತಾ ಅನುಮಾನ ಕಾಡತೊಡಗಿದೆ.
ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಬಡವರ ಅಕ್ಕಿಯನ್ನು ಪೋಲಾಗುವುದನ್ನು ತಪ್ಪಿಸುವ ಕೆಲಸ ಮಾಡಬೇಕಿದೆ.