ಅರ್ಥ ಪೂರ್ಣವಾಗಿ ದಿ.ಇಂದಿರಾ ಗಾಂಧಿಯವರ ಜನ್ಮದಿನೋತ್ಸವ ಆಚರಿಸಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ದೀಪಾ ಗೌರಿ

ದೇಶದ ಮೊದಲ ಮಹಿಳಾ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ 106 ನೇ ಜನ್ಮದಿನೋತ್ಸವವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ದೀಪಾ ನಾಗರಾಜ್ ಗೌರಿ ಅವರ ನೇತೃತ್ವದಲ್ಲಿ ಬೆಳಿಗ್ಗೆ 11-00 ಗಂಟೆಗೆ ಹುಬ್ಬಳ್ಳಿ ಬೆಂಗೇರಿಯ ಇಂದಿರಾ ಕ್ಯಾಂಟಿನಲ್ಲಿ ಬೆಳಗಿನ ಉಪಹಾರವನ್ನು ಬಡವರಿಗೆ ಉಚಿತವಾಗಿ ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.

ಮೊದಲಿಗೆ ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿ,ಅಲ್ಲಿನ ಪೌರಕಾರ್ಮಿಕರಿಗೆ ಹಾಗೂ ಬಡವರಿಗೆ ಉಚಿತವಾಗಿ ಇಂದಿರಾ ಕ್ಯಾಂಟೀನ್ ನಲ್ಲಿ ಉಪಹಾರವನ್ನು ನೀಡಲಾಯಿತು. ನಂತರ ಇಂದಿರಾಗಾಂಧಿಯವರು ಮಾಡಿದಂತಹ ಅಭೂತಪೂರ್ವ ಸಾಧನೆಗಳನ್ನು ನೆನೆದು ಮತ್ತೊಮ್ಮೆ ಇಂದಿರಾಗಾಂಧಿಯವರು ಹುಟ್ಟಿ ಬರಲಿ ಎಂದು ಹಾರೈಸಿ, ವರ್ಲ್ಡ್ ಕಪ್ ಫೈನಲ್ಗೆ ಪ್ರವೇಶ ಪಡೆದಂತ ಭಾರತದ ಕ್ರಿಕೆಟ್ ತಂಡಕ್ಕೆ ಕೂಡಾ ಈ ಸಂಧರ್ಭದಲ್ಲಿ ಶುಭ ಹಾರೈಯಿಸಲಾಯಿತು .

ಇನ್ನು ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್ , ಬ್ಲಾಕ್ ಅಧ್ಯಕ್ಷರಾದಂತಹ ಶರೀಫ್ ಗರ್ಗದ್, ಕಲಾವತಿ ರಾಮಚಂದ್ರನ್, ಬಾಳಮ್ಮ ಜಂಗಿ ನವರ್, ಸುಜನ್ ಖಾಕಿ, ಲಕ್ಷ್ಮಿ ಗುತ್ತೇ, ಅಕ್ಕಮ್ಮ ಕಂಬಳಿ ಹಾಗೂ ಕಾಂಗ್ರೆಸ್ ಮುಖಂಡರಾದಂತ ಹೂವಪ್ಪ ದಯಾಗೋಡಿ, ಚೌ ಶೆಟ್ಟಿ,ಕಾಸಿಮ್ ಕೂಡಲಗಿ, ಸುನಿಲ್ ಮಠಪತಿ, ಗಂಗಾಧರ್, ಹಾಗೂ ಅನೇಕ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು