ಮನೆಗೆ ನುಗ್ಗಿದ ವ್ಯಕ್ತಿಯನ್ನು ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು!!!

ಹುಬ್ಬಳ್ಳಿಯಲ್ಲಿ ಬಿಹಾರಿ ಮೂಲದ ವ್ಯಕ್ತಿಯೊರ್ವ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ ಪೈಶಾಚಿಕ ಕೃತ್ಯ ಮಾಸುವ ಮುನ್ನವೇ, ಕಾಮುಕನೊರ್ವ ನಾಲ್ಕೂವರೆ ವರ್ಷದ ಬಾಲಕಿಯ ಮೇಲೆ ದುಷ್ಕತ್ಯ ಎಸಗಲು ಪ್ರಯತ್ನ ಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಶಿರಡಿ ನಗರದಲ್ಲಿ ಈ ಒಂದು ಘಟನೆ ನಡೆದಿದ್ದು, ಮೂರನೇ ಅಂತಸ್ಥಿನಲ್ಲಿರುವ ಮನೆಯಲ್ಲಿ ಒಬ್ಬಂಟಿಯಾಗಿ ಬಾಲಕಿ ಇರುವುದನ್ನು ಗಮನಿಸಿದ ವ್ಯಕ್ತಿಯೊರ್ವ ಬಾಲಕಿ ಮನೆಗೆ ಏಕಾಏಕಿ ನುಗ್ಗಿ, ಬಾಗಿಲು ಹಾಕಿಕೊಳ್ಳಲು ಮುಂದಾಗಿದ್ದಾನೆ.
ಈ ವೇಳೆ ಬಾಲಕಿಯ ಪೋಷಕರು ಸಮಯಕ್ಕೆ ಸರಿಯಾಗಿ ಮನೆಗೆ ಆಗಮಿಸಿದ್ದು, ಇನ್ನೇನು ಮನೆಯ ಬಾಗಿಲು ಹಾಕಿಕೊಳ್ಳುವಷ್ಟರಲ್ಲಿ ಬಾಗಿಲು ತಡೆಹಿಡಿದಿದ್ದಾರೆ.
ಇನ್ನೂ ಆ ವ್ಯೆಕ್ತಿ ಕಂಠಪೂರ್ತಿ ಕುಡಿದಿದ್ದು, ಕುಡಿದ ನಶೆಯಲ್ಲಿ ಈ ಕೃತ್ಯಕ್ಕೆ ಪ್ರಯತ್ನಿಸಿದ್ದಾನೆಂದು ತಿಳಿದುಬಂದಿದೆ. ಈಗಾಗಲೇ ಸ್ಥಳೀಯರು ಹಾಗೂ ಪೋಷಕರು ವ್ಯೆಕ್ತಿಗೆ ಸರಿಯಾದ ಧರ್ಮಧೇಟು ನೀಡಿ ಪೋಲಿಸರಿಗೆ ಒಪ್ಪಿಸುವ ಕೆಲಸ ಮಾಡಿದ್ದಾರೆ.
ಈ ಘಟನೆ ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂತಹ ಘಟನೆಗಳಿಂದಾಗಿ ಸಮಾಜ ಎತ್ತ ಸಾಗುತ್ತಿದೆ, ಮಹಿಳೆಯರಿಗೆ ರಕ್ಷಣೆ ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.