ಹುಬ್ಬಳ್ಳಿಯ ಸಿದ್ದಾರೂಢ ಮಠದ ಧರ್ಮದರ್ಶಿ ವಿರುದ್ಧ FIR

ಹುಬ್ಬಳ್ಳಿ ಸಿದ್ದಾರೂಢ ಮಠದ ಧರ್ಮದರ್ಶಿ ವಿರುದ್ಧ ಎಫ್ಐಆರ
ಹುಬ್ಬಳ್ಳಿಯ ಸಿದ್ದರೂಢ ಮಠದ ಧರ್ಮದರ್ಶಿ ರಾಣೇಬೆನ್ನೂರ್ ತಾಲೂಕಿನ ಹಿರೇಬಿದರಿ ಗ್ರಾಮದ ಸಿದ್ದನಗೌಡ ಪ್ರಭುಗೌಡ ಪಾಟೀಲ್ ಎಂಬುವರು ಭಕ್ತರಿಂದ ದೇಣಿಗೆ ಪಡೆದು ಅವರಿಗೆ ರಶೀದಿ ನೀಡದೆ ವಂಚಿಸಿದ್ದ ಪ್ರಕರಣ ಒಂದು ಬೆಳಕಿಗೆ ಬಂದಿದೆ
ಹೌದು ಧರ್ಮದರ್ಶಿ ಹೆಸರಿನಲ್ಲಿ ಹೆಣ್ಣು ಮಕ್ಕಳ ಲೈಂಗಿಕ ಕಿರುಕುಳ ಮತ್ತು ಹಣ ವಸೂಲಿ ವಂಚನೆಯಲ್ಲಿ ಮಾಡಿರುವ ಆರೋಪವು ಕೇಳಿಬಂದಿದೆ
ಮಣಕೂರು ಭಕ್ತರು ಸಂಗ್ರಹಿಸಿದ 50,375 ದೇಣಿಗೆಯನ್ನು ಧರ್ಮದರ್ಶಿ ಎಂದು ಇವನ ಹತ್ತಿರ ನೀಡಿರುತ್ತಾರೆ. ಆದರೆ ಇವನು ಆ ಹಣವನ್ನು ಮಠಕ್ಕೆ ಪಾವತಿಸದೆ ತನ್ನ ಸ್ವಂತ ಬೊಕ್ಕಸೆಗೆ ಹಾಕಿಕೊಂಡಿರುತ್ತಾನೆ
ಈ ಸಂಬಂಧ ಹುಬ್ಬಳ್ಳಿ ಸಿದ್ದಾರೂಡ ಟ್ರಸ್ಟ್ ನಲ್ಲಿ ವಿಚಾರಿಸಿದಾಗ ಈ ಹಣ ಪಾವತಿ ಆಗಿಲ್ಲ ಎಂದು ತಿಳಿಸುತ್ತಾರೆ
ಈ ಬಗ್ಗೆ ಆತನ ರಶೀದಿ ಬಗ್ಗೆ ವಿಚಾರಿಸಿದಾಗ ಭಕ್ತರ ಮೇಲೆ ಹಲ್ಲೆ ಮಾಡಿ ಆವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಳೆದ 30 ವರ್ಷದಿಂದ ತಾಲೂಕಿನ ಅತ್ಯಂತ ಸಿದ್ಧಾರೂಢ ಜಾತ್ರೆಗೆ ನೂರಾರು ಕ್ವಿಂಟಲ್ ನಷ್ಟು ದವಸ ಧಾನ್ಯ ಲಕ್ಷಾಂತರ ರೂಪಾಯಿ ದೇಣಿಗೆ ರೂಪದಲ್ಲಿ ನೀಡುತ್ತಿದ್ದಾರೆ.
ಈತ ಮಠದ ಹೆಸರು ದುರ್ಬಳಕೆ ಮಾಡಿಕೊಂಡು ತನ್ನ ಫೋನ್ ಫೆ ಮೂಲಕ ಮತ್ತು ನಗದು ಹಣವನ್ನು ಪಡೆದಿರುತ್ತಾರೆ
ಈತನ ದುರ್ನಡೆತೆ ನಡತೆ ಮತ್ತು ಸಿದ್ದರೂಡ್ ಮಠದ ಹೆಸರಲ್ಲಿ ಅವ್ಯವಾರ ಮಾಡಿರುವ ಇವನ ಬಗ್ಗೆ ತಾಲೂಕಿನ ಹಾಲಿ ಮತ್ತು ಮಾಜಿ ಶಾಸಕರುಗಳು ಭಕ್ತರು ರೈತ ಮತ್ತು ಕನ್ನಡ ಪರ ಸಂಘಟನೆಗಳು ಅಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿ ಇವನನ್ನು ಕೂಡಲೇ ವಜಾ ಗೊಳಿಸಲು ಆಗ್ರಹಿಸಿದ್ದಾರೆ