ಹುಬ್ಬಳ್ಳಿಯಲ್ಲಿ ರೌಢಿಶೀಟರ್’ನಿಂದ ಅಮಾಯಕನ ಮೇಲೆ ದರ್ಪ…ಶಾಲಿಮಾರ ಹೊಟೇಲ್ ಟು ಮಂಟೂರ್ ಇವನದೇ ಹವಾ ಕ್ಯಾರೇ.. ….ಡಿ

ಹುಬ್ಬಳ್ಳಿಯಲ್ಲಿ ಪೊಲೀಸರು ಎಷ್ಟೇ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದರೂ ಸಹ ಖಾಕಿ ಭಯ ರೌಢಿಶೀಟರ್’ಗಳಿಗೆ ಇಲ್ಲದಂತಾಗಿದೆಯೇ ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಇಸ್ಪೀಟು ಜೂಜಾಟದ ಕಿಂಗ್ ಪಿನ್, ಅಲ್ಲದೇ ರೌಢಿಶೀಟರ್ ಒಬ್ಬ ಅಮಾಯಕ ಯುವಕನೊರ್ವ ಕೈ ನಾಯಕರೊಬ್ಬರ ಮಗನ ವಿಚಾರವಾಗಿ ಮಾತನಾಡಿದ್ದಾನೆ ಎಂದು ಆತನನ್ನು ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹತ್ತಿರದ ಶಾಲಿಮಾರ್ ಹೊಟೆಲ್ ಹತ್ತಿರ ಆತನನ್ನು ಎತ್ತಿಕೊಂಡು ಆ ನಾಯಕನ ಕಛೇರಿಗೆ ಕರೆದೊಯ್ದು ಮನಬಂದಂತೆ ಥಳಿಸಿದ್ದಾನಂತೆ, ಅಲ್ಲದೇ ನಾಯಕನಿಗೆ ತಪ್ಪಾಯಿತು ಎಂತಾ ಕ್ಷಮೆ ಕೇಳಿಸಿದ್ದಾನಂತೆ.
ಇಷ್ಟಕ್ಕೆ ಬಿಡದ ಆ ರೌಢಿಶೀಟರ್ ತನ್ನ ರೈಲ್ವೆ ನಿಲ್ದಾಣದ ಕೂಗಳತೆಯ ಶೆಡ್’ನ ಕಚೇರಿಗೆ ಎಳೆಯೊದ್ದು ಅಲ್ಲಿಯೂ ಹಲ್ಲೆ ಮಾಡಿದ್ದಾನಂತೆ. ಆತನ ಶೆಡ್ ಸುತ್ತಮುತ್ತಲೂ ರೌಡಿ ಶೀಟರ ತನ್ನ ಹವಾ ಮೆಂಟೆನ್ ಮಾಡಿದ್ದನಂತೆ
ಇಷ್ಟಾದರೂ ಸಹ ಪಾಪಾ ಅಮಾಯಕ ವ್ಯಕ್ತಿ ರೌಢಿಶೀಟರ್ ಹಾಗೂ ಕೈನಾಯಕನಿಗೆ ಹೆದರಿ ಈ ಬಗ್ಗೆ ಖಾಕಿಗೆ ವಿಚಾರ ತಿಳಿಸಲು ಭಯಗೊಂಡಿದ್ದಾನೆಂದು ತಿಳಿದುಬಂದಿದೆ.
ಈಗಲಾದರೂ ಖಾಕಿ ಭಯವಿಲ್ಲದೇ ಅಮಾಯಕ ಜನರ ಮೇಲೆ ಧರ್ಪ ಮೆರೆಯುತ್ತಿರುವ ರೌಢಿಶೀಟರ್’ಗೆ ಖಾಕಿ ಯಾವ ರೀತಿಯ ಬುದ್ದಿ ಕಲಿಸುತ್ತದೆ ಎಂಬುದನ್ನಕಾದುನೋಡಬೇಕಿದೆ.