Uncategorized

ರೋಡ್ ಶೋ ಮುಖಾಂತರ ನಾಮಪತ್ರ ಸಲ್ಲಿಸಿದ ಪ್ರಹ್ಲಾದ ಜೋಶಿ. ಸಾವಿರಾರು ಕಾರ್ಯಕರ್ತರು ಹಾಗು ಮಾಜಿ ಮುಖ್ಯಮಂತ್ರಿಗಳು ಹಾಗು ಮಾಜಿ ಸಚಿವರು ಭಾಗಿ

ಪ್ರಧಾನಿ ಮೋದಿ ಆಪ್ತ ವಲಯದಲ್ಲಿ ಗುರುತಿಸಲ್ಪಡುವ ಕೇಂದ್ರ  ಪ್ರಬಲ ಸಚಿವ ಪ್ರಹ್ಲಾದ ಜೋಶಿಯವರ ನಾಮಪತ್ರ ಸಲ್ಲಿಕೆಗೆ ಧಾರವಾಡ ಜಿಲ್ಲೆಯಿಂದ ಜನಸಾಗರವೇ ಹರಿದು ಬಂದು ಅವರು ಐದನೇ ಬಾರಿಗೆ ಗೆಲುವು ಶತಃಸಿದ್ದ ಎಂಬ ಸ್ಪಷ್ಟ ಸಂದೇಶವನ್ನು ವಿರೋಧಿ ಪಾಳೆಯಕ್ಕೆ ರವಾನಿಸುವಲ್ಲಿ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ.

ಇನ್ನು ಮುಂಜಾನೆಯಿಂದ ದೇವಸ್ಥಾನಗಳಿಗೆ ಬೆಟ್ಟಿ ನೀಡುವುದರ ಮೂಲಕ ನಾಮ ಪತ್ರ ಸಲ್ಲಿಸಲು ಧಾರವಾದಕ್ಕೆ ಹೋಗಿದ್ದು ವಿಶೇಷವಾಗಿತ್ತು


ಬೆಳಿಗ್ಗೆ ಜೋಶೀಯವರು ದೇವಸ್ಥಾನ-ಮಠಗಳ ಭೇಟಿ ಬಳಿಕ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಪಕ್ಷದ ವರಿಷ್ಟರೊಂದಿಗೆ ಧಾರವಾಡದ ಶಿವಾಜಿ ವೃತ್ತದಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಆರಂಭಿಸಿದರು.

ಪ್ರಮುಖ ಬೀದಿಗಳಲ್ಲಿ ಸಾಗಿದ ಬೃಹತ್ ಮೆರವಣಿಗೆಯಲ್ಲಿ ಹುಬ್ಬಳ್ಳಿ- ಧಾರವಾಡ ಜಿಲ್ಲೆಯಿಂದ ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದ್ದರು. ಜೆಡಿಎಸ್‌ ಪ್ರಮುಖರು, ಕಾರ್ಯಕರ್ತರು ಸಹ ಪಾಲ್ಗೊಂಡು ಮೈತ್ರಿಕೂಟದ ಬಲ ಪ್ರದರ್ಶಿಸಿದರು.


ಸುಮಾರು 40ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡ ರೋಡ್ ಶೋನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹಾಗು ಚುನಾಯಿತ ಪ್ರತಿನಿಧಿಗಳು ಅನೇಕ ಮುಖಂಡರು ಹಾಗು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು

ಇನ್ನು ಜೋಶಿಯವರು 4 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಅಂತಾ ಅವರ ಕಾರ್ಯಕರ್ತರು ಹೇಳುತ್ತಿದ್ದಾರೆ ಅವರು ಕಳೆದ ನಾಲ್ಕು ಅವಧಿಗಳಲ್ಲಿಯೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅತ್ಯಂತ ಪರಿಶ್ರಮಿ ನಾಯಕ ಎಂದು ಬಣ್ಣಿಸಿದರು. ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಕ್ಷೇತ್ರದಾದ್ಯಂತ ಅದ್ಭುತ ಅಭಿವೃದ್ಧಿ ಕಾರ್ಯಗಳನ್ನು ಪ್ರಹ್ಲಾದ ಜೋಶಿಯವರು ಮಾಡಿದ್ದಾರೆ  ಈ ಬಾರಿಯು 4 ಲಕ್ಷ ಅಂತರದಿಂದ ಗೆಲ್ಲುತ್ತಾರೆ ಧಾರವಾಡಕ್ಕೆ ಜೋಶಿ  ಹಾಗು ಭಾರತಕ್ಕೆ ಮೋದಿ ಎಂದು ಅಣ್ಣಪ್ಪಾ ಗೋಕಾಕ ಹೇಳಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮಾಜಿ ಸಂಸದರಾದ ವಿಜಯ್ ಸಂಕೇಶ್ವರ್, ಪ್ರಭಾಕರ್ ಕೋರೆ, ಮಾಜಿ ಸಚಿವರಾದ ಭೈರತಿ ಬಸವರಾಜ್‌, ಶಾಸಕರಾದ ಅರವಿಂದ ಬೆಲ್ಲದ. ಮಹೇಶ ಟೆಂಗಿನಕಾಯಿ. ಸಿ ಸಿ ಪಾಟೀಲ. ಮಾಜಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪಾ ಸಿ ಟಿ ರವಿ ಹಾಗು ತಿಪ್ಪಣ್ಣ ಮಜ್ಜಗಿ Jds ಮುಖಂಡ ವೀರಭದ್ರಪ್ಪ ಹಾಲಹರವಿ ಸಹಿತ ಅನೇಕ ಮುಖಂಡರು ನಾಯಕರು ಸಾಥ್ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!