ಶರೇವಾಡ ಹಾಗು ಸುತ್ತಮುತ್ತಲಿನ ಹಳ್ಳಿ ಗಳಲ್ಲಿ ಆ.14 ರಂದು ವಿದ್ಯುತ್ ವ್ಯತ್ಯಯ

ಹುಬ್ಬಳ್ಳಿಯ 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರ ಬಿಡನಾಳದಿಂದ ಹೊರಡುವ ಶೆರೆವಾಡ ಫೀಡರ ಮಾರ್ಗದಲ್ಲಿ ತುರ್ತು ನಿರ್ವಹಣಾ ಕೆಲಸ ಹಾಗೂ 11 ಕೆವಿ ಮಾರ್ಗದ ಮರು ಜೋಡಣೆ ಕಾಮಗಾರಿಯನ್ನು ಆಗಸ್ಟ್ 14, ರವಿವಾರ ಕೈಗೊಳ್ಳಬೇಕಾಗಿರುವುದರಿಂದ ಶರೇವಾಡ ಫೀಡರನಿಂದ ವಿದ್ಯುತ್ ಪೂರೈಕೆಯಾಗುವ ಕುಂದಗೋಳಕ್ರಾಸ್ , ಕೊಟಗೊಂಡಹುಣಸಿ , ಅದರಗುಂಚಿ , ನೂಲ್ವಿ ಶರೇವಾಡ , ಪಾಳ ಹಾಗೂ ಸುತ್ತಮುತ್ತಲಿನ ಕೈಗಾರಿಕೆ ಪ್ರದೇಶಗಳಿಗೆ ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆಯವರೆಗೆ ವಿದ್ಯುತ ಪೂರೈಕೆ ವ್ಯತ್ಯಯವಾಗುವುದು ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಹುಬ್ಬಳ್ಳಿ ಗ್ರಾಮೀಣ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜನೀಯರ್ ಕೋರಿದ್ದಾರೆ.
