20 ರಂದು ಶಿವ 143 ಚಿತ್ರ ಪ್ರಮೋಷನ್ ರಾಘು ವದ್ದಿ

ಹುಬ್ಬಳ್ಳಿ : ವರನಟ ಡಾ. ರಾಜಕುಮಾರ್ ಅವರ ಮೊಮ್ಮಗ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಳಿಯ ದೀರನ್ ರಾಮ್ ಕುಮಾರ್ ತಮ್ಮ ಚೊಚ್ಚಲ ಚಿತ್ರ ಶಿವ ೧೫೩ ಚಿತ್ರ ಇದೇ ದಿ. ೨೬ ರಂದು ಬಿಡುಗಡೆಯಾಗಲಿದ್ದು, ಈ ಹಿನ್ನಲೆಯಲ್ಲಿ ಪ್ರಮೋಷನ್ ಗಾಗಿ ಇದೇ ದಿ. ೨೦ ರಂದು ನಗರಕ್ಕೆ ಆಗಮಿಸುತ್ತಿದ್ದು, ಅಂದು ಬೆಳಿಗ್ಗೆ ಸಿದ್ಧಾರೂಢಮಠದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆಂದು ಜೈ ರಾಜವಂಶ ಅಭಿಮಾನಿಗಳ ಸಂಘ ರಾಘು ವದ್ದಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮದಲ್ಲಿ ಅಪ್ಪು ಸಹೋದರಿ ಪೂರ್ಣಿಮಾ ರಾಮ್ ಕುಮಾರ, ಧನ್ಯಾ ರಾಮ್ ಕುಮಾರ ಭಾಗವಹಿಸಲಿದ್ದು, ಅಂದು ಚಿತ್ರದ ಪ್ರಮೋಷನ್ ಗಾಗಿ ನಗರದ ಮೂರುಸಾವಿರಮಠದಿಂದ ಚನ್ನಮ್ಮ ವೃತ್ತದವರೆಗೂ ಉತ್ತರ ಕರ್ನಾಟಕದ ಸಂಪ್ರದಾಯದಂತೆ ಕುಂಭ, ಮೆರವಣಿಗೆ, ಡೊಳ್ಳು ಕುಣಿತ, ಬೊಂಬೆ ಕುಣಿತ ಸೇರಿದಂತೆ ಅಪ್ಪು ಭಾವಚಿತ್ರವನ್ನು ಬೃಹತ್ ಪ್ರಮಾಣದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹನುಮಂತ ಉಪ್ಪಾರ, ರಾಜು ಗೊಬ್ಬರಗುಂಪಿ, ಕುಮಾರ ಯಾತಗೇರಿ ಉಪಸ್ಥಿತರಿದ್ದರು