Uncategorized

ಕಾಂಗ್ರೇಸ್ ಪಕ್ಷದಲ್ಲಿ ನಾಯಕತ್ವದ ದುರಂಹಕಾರ ಪರಮಾವಧಿ ಹೆಚ್ಚಾಗಿದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕಾಂಗ್ರೇಸ್ ಪಕ್ಷದಲ್ಲಿ ಬೌದ್ದಿಕ ದೀವಾಳಿತನ ಹೆಚ್ಚಾಗುತ್ತಿದೆ ಹೀಗಾಗಿ ಹಿರಿಯರು ಕಾಂಗ್ರೇಸ್ ಪಕ್ಷವನ್ನು ಬೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಧಾರವಾಡದ ಮುಗದ ಗ್ರಾಮದಲ್ಲಿ ಮಾತನಾಡಿದ ಅವರು ಗುಲಾಂ ನಬಿ ಆಜಾದ ರಾಜೀನಾಮೆ ವಿಚಾರ ಕುರಿತಂತೆ ಮಾತನಾಡಿ ಈಗಾಗಲೇ ಅನೇಕ ಹಿರಿಯರು ಬಿಟ್ಟು ಹೋಗಿದ್ದಾರೆ.ಇದಕ್ಕೆ ಆ ಪಕ್ಷದಲ್ಲಿ ನಾಯಕತ್ವದ ದುರಂಹಕಾರ ಪರಮಾವಧಿಯಿಂದ ಆಗುತ್ತಿದೆ ಎಂದರು.ಇನ್ನೂ ಆಯಾ ನಾಯಕತ್ವದ ಅವಧಿ ಮುಗಿದಾಗ ಬಿಟ್ಟು ಕೊಡಬೇಕು ಆದರೆ ಕಾಂಗ್ರೆಸ್ ಪಕ್ಷದಲ್ಲಿ ಅದು ಆಗುತ್ತಿಲ್ಲ ಎಂದರು.ಆ ಕಾರಣದಿಂದಾಗಿ ಗುಲಾಂ ನಬಿ ಆಜಾದ ಪಕ್ಷ ಬಿಟ್ಟಿದ್ದಾರೆ ಎಂದರು.ಇನ್ನೂ ಚಿತ್ರದುರ್ಗ ಮುರುಘಾಮಠದ ಸ್ವಾಮಿಜಿಯವರ ಮೇಲೆ ದಾಖಲಾಗಿರುವ ‌ಪೋಕ್ಸೋ ಪ್ರಕರಣ‌ ವಿಚಾರ ಕುರಿತಂತೆ ಮಾತನಾಡಿದ ಅವರು ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ ಅದಕ್ಕೆ ಹೆಚ್ಚು ಮಾತನಾಡುವ ಅಗತ್ಯ ಇಲ್ಲಾ ಸ್ವಾಮೀಜಿ‌ ನಾಡಿದ ಪ್ರತಿಷ್ಠಿತರು ಇದ್ದಾರೆ ಸೂಕ್ತ ಹಾಗೂ ನ್ಯಾಯಯೂತವಾದ ತನಿಖೆಯಾಗಲಿ ಈಗ ಎಲ್ಲದಕ್ಕೂ ಪ್ರತಿಕ್ರಿಯೆ ಕೊಡಬೇಕು ಅಂತಾ‌ ಇರಲ್ಲ ಎಂದರು. ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾಗುತ್ತಾರೆಂಬ ವಿಚಾರ ಕುರಿತಂತೆ ಮಾತನಾಡಿದ ಅವರು ಬದಲಾವಣೆ ಬರುತ್ತೇ ಅಂತಾ ಮಾಧ್ಯಮಗಳು ಹೇಳುತ್ತಿವೆ ಸಾಮಾನ್ಯವಾಗಿ ಮೂರು ವರ್ಷ ಅವಧಿ ನಮ್ಮಲ್ಲಿ ಇರುತ್ತದೆ ಆದರೆ ಮೂರು ವರ್ಷದ ಬಳಿಕ ಬದಲಾವಣೆ ಮಾಡಲೇಬೇಕು ಅಂತಿಲ್ಲ ಮಾಧ್ಯಮಗಳೇ ಬದಲಾವಣೆ ಅಂತಾ ಹೇಳುತ್ತಿವೆ ಕಾರಣಿಕ ಹೇಳಿದಂತೆ ಮಾಧ್ಯಮಗಳೇ ಡೇಟ್ ಹೇಳುತ್ತಿವೆ ನಮ್ಮಲ್ಲಿ ಆ ಯಾವುದೇ ಚರ್ಚೆ ಆಗಿಲ್ಲ ಯಡಿಯೂರಪ್ಪ ಎಂದರು. ಇನ್ನೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿ ಭೇಟಿ ವಿಚಾರ ಕುರಿತಂತೆ ಮಾತನಾಡಿ ಯಡಿಯೂರಪ್ಪ ಈಗ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರಾಗಿದ್ದಾರೆ.ಅವರು ಪಕ್ಷದ ಹಿರಿಯರಲ್ಲೊಬ್ಬರು ನೇಮಕದ ಹಿನ್ನೆಲೆ ಪ್ರಮುಖ ನಾಯಕರ ಭೇಟಿಗೆ ಹೋಗಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!