ದೊಡ್ಡಮ್ಮನನ್ನು ಕೊಲೆ ಮಾಡಿ ತೆಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಕಸಬಾ ಪೋಲಿಸರು.

ಕಳೆದ ೨-೩ ತಿಂಗಳು ಹಿಂದೆ ಇಡೀ ಹುಬ್ಬಳ್ಳಿಯನ್ನು ಬೆಚ್ಚಿಬಿಳಿಸಿದ ಕೊಲೆ ಪ್ರಕರಣ ಎಲ್ಲಡೆ ಹರಡಿತು. ಹಣದ ಆಸೆಗಾಗಿ ತನ್ನ ೭೦ ವರ್ಷದ ದೊಡ್ಡಮ್ಮನ ಕಿವಿ ಕಟ್ ಮಾಡಿ ಬಂಗಾರದ ಆಭರಣಗಳನ್ನು ಧೋಚಿ ಕೊಲೆ ಮಾಡಿ ಯಾವುದೇ ಸುಳಿವು ಸಿಗದೆ ಪರಾರಿಯಾಗಿದ್ದ ಆರೋಪಿ.

ಚಲನಚಿತ್ರದ ರೀತಿಯಲ್ಲಿ ಆರೋಪಿ ಯಾವುದೇ ಸುಳಿವು ಸಿಗಬಾರದೆಂದು ತನ್ನ ಮೊಬೈಲ್ ಪೋನ ಕೂಡಾ ಉಪಯೋಗಿಸುತ್ತಿರಲಿಲ್ಲ.ಇದರ ಹಿನ್ನಲೆಯಲ್ಲಿ ಕಸಾಬಾ ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಇದು ದೊಡ್ಡ ತಲೆನೋವಾಗಿತ್ತು ಕೊನೆಗೆ ಈ ಕೊಲೆ ಪ್ರಕರಣವನ್ನು ರಾಘವೇಂದ್ರ ಹಳ್ಳುರು ಮತ್ತು ಅವರ ತಂಡ ಪ್ರಕರಣ ಬೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯ ಆರೋಪಿ ಮಾಲತೇಶ ಬೆಂಗಳೂರು ಸಹಿತ ಅನೇಕ ಜಿಲ್ಲೆಗಳಲ್ಲಿ ತೆಲೆ ಮರೆಸಿಕೊಂಡು ಕೊನೆಗೆ ಬೆಳಗಾವಿಯಲ್ಲಿ ತಲೆ ಮರೆಸಿಕೊಂಡು ತಿರುಗುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪೋಲಿಸರು ಕೊಲೆ ಆರೋಪಿಯಾದ ಮಾಲತೇಶನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ .

ಈ ಪ್ರಕರಣ ಭೇಧಿಸಿದ ಕಸಬಾ ಠಾಣೆಯ ಇನ್ಸಪೆಕ್ಟರ ಹಾಗೂ ಅವರ ತಂಡಕ್ಕೆ ಪೋಲಿಸ್ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.