ರಾಷ್ಟ್ರಪತಿಯವರ ಪೌರಸನ್ಮಾನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರಿಂದ ಬಹಿಷ್ಕಾರ

ಪಾಲಿಕೆಯಲ್ಲಿ ಇಂದು ರಾತ್ರಿ ವಿರೋದ ಪಕ್ಷದ ನಾಯಕರ ಆಪೀಸಿನಲ್ಲಿ ಸುದ್ದಿಘೋಷ್ಠಿ ನಡೆಸಿ ಮಾತನಾಡಿದ ಪಾಲಿಕೆಯ ಸದಸ್ಯರು ವಿರೋದ ಪಕ್ಷದ ನಾಯಕ ಪಕ್ಷದ ವತಿಯಿಂದ ರಾಷ್ಟ್ರಪತಿಯವರ ಪೌರಸನ್ಮಾನಕ್ಕೆ ಸ್ವಾಗತವಿದ್ದು ಪಾಲಿಕೆಯಲ್ಲಿ ವಿರೋಧ ಪಕ್ಷದ ಸ್ಥಾನವು ಇದೆ ಆದರೆ ಮೇಯರ ಅವರು ಯಾವೊಬ್ಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ಒಂದು ಪೌರ ಸನ್ಮಾನ ಕಾರ್ಯಕ್ರಮ ವನ್ನು ಬಿಜೆಪಿ ಕಾರ್ಯಕ್ರಮದ ಹಾಗೆ ಮೆಯರ್ ಅವರು ಮಾಡುತ್ತಿದ್ದಾರೆ
. ಇನ್ನು ಕಾಂಗ್ರೆಸನ್ 34 ಸದಸ್ಯರು, ಇತರ ಸದಸ್ಯರು ಇದ್ದಾರೆ. ಜಾಹಿರಾತು, ಆಮಂತ್ರಣ ಪ್ರತಿಗಳಲ್ಲಿ ನಮ್ಮ ಪಕ್ಷದ ಸದಸ್ಯರ ಭಾವ ಚಿತ್ರ ಇರುವುದಿಲ್ಲಾ ಅದ್ರೆ ನಾಳಿನ ಕಾರ್ಯಕ್ರಮಕ್ಕೆ ಪಕ್ಷದಿಂದ ವಿರೋಧವಿದೆ. ಪ್ರತಿಭಟನೆ ಮಾಡುವುದಿಲ್ಲ. ನಾಳೆ ಯಾರೂ ಕಾರ್ಯಕ್ರಮಕ್ಕೆ ಭಾಗವಹಿಸುವುದಿಲ್ಲ. ಮುಂಬರುವ ದಿನಗಳಲ್ಲಿ ಅವಳಿ ನಗರದಲ್ಲಿ ತುಂಬಾ ಸಮಸ್ಯೆಗಳು ಇವೆ ಇನ್ನು ಪಾಲಿಕೆಯ ವಿರೋಧ ಪಕ್ಷದ ನಾಯಕರಿಗೆ ವೇದಿಕೆ ಮೇಲೆ ಜಾಗವಿಲ್ಲ. ಅಭಿವೃದ್ದಿ ಕೆಲಸಗಳನ್ನು ಮಾಡಲು ದುಡ್ಡಿಲ್ಲ ಎನ್ನುತ್ತಾರೆ. ಆದ್ರೆ ಕಾರ್ಯಕ್ರಮಕ್ಕೆ ಕೋಟ್ಯಾಂತರ ಹಣವನ್ನು ಖರ್ಚು ಮಾಡುತ್ತಿದ್ದಾರೆ.
ಇದು ದೊಡ್ಡ ಕಾರ್ಯಕ್ರಮ, ಜಿಬಿ ಕರೆದು ಕಾರ್ಯಕ್ರಮ ಮಾಡಬೇಕಿತ್ತು. ಆದರೆ ಮೇಯರ್ ಒಮ್ಮಿಂದೊಮ್ಮೆಲೆ ಮೋದಿ ಮಾದರಿಯಲ್ಲಿ ಹಿಟ್ಲರ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇನ್ನು
ಯಾವುದಕ್ಕೆ ಏನೇನು ವೆಚ್ಚ ಮಾಡುತ್ತಿದ್ದಾರೆ ಎಂದು ಏನೂ ಗೊತ್ತಿಲ್ಲ. ಅದು ಬಿಜೆಪಿ ಕಾರ್ಯಕ್ರಮದಂತೆ ಮಾಡುತ್ತಿದ್ದಾರೆ. ಅಲ್ಲಿಯ ವಾತಾವರಣ ಹಾಗಿದ್ದು, ತಮಗೆ ಯಾವ ಗೌರವ ಸಹ ನೀಡುತ್ತಿಲ್ಲ. ಮೇಯರ್ ಹೇಳುತ್ತಿರುವುದು ಒಂದು, ಮಾಡುತ್ತಿರುವುದು ಒಂದು.
ನಾಲ್ಕು ದಿನದಿಂದ ತಮಗೆ ಕೋವಿಎಡ್ ಟೆಸ್ಟ್ ಗೆ ಕರೆದಿದ್ದಾರೆ. ಅವರು ಖರ್ಚು ಮಾಡುವ ಹಣ ನೋಡಿ ಬೇಜಾರಾಗಿದೆ. ಮೊದಲೇ ಪಾಲಿಕೆ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಇದು ವೇಸ್ಟ್. ಇತಿಮಿತಿಯಲ್ಲಿ ಮಾಡಬಹುದಿತ್ತು.
ಕಟೌಟ್ ಹಾಕಿದ್ದಾರೆ, ಎಲ್ಲದರಲ್ಲೂ ಬಿಜೆಪಿ ನಾಯಕರದ್ದೇ ಭಾವಚಿತ್ರ ಇದೆ. ಇಷ್ಟು ದಿನ ಜೊತೆಯಿದ್ದು ವಾತಾವರಣ ನೋಡಿದ್ದೇವೆ. ಫೋಟೊ ಸೆಷನ್ಸ್ ಕ್ಯಾನ್ಸಲ ಮಾಡಿದ್ದು ಮೇಯರ್ ಮಾತ್ರ ಇರುತ್ತಾರಂತೆ
. ನಿನ್ನೆವರೆಗರೆ ಎಲ್ಲವು ಸರಿ ಇತ್ತು ಆದ್ರೆ ಸಂಜೆಯಾಗುತ್ತಿದ್ದಂತೆ ಎಲ್ಲವನ್ನು ಬದಲಾಯಿಸುತ್ತಾರೆ.
ವಿರೋಧ ಪಕ್ಷದ ನಾಯಕರ ಸನ್ಮಾನ, ಫೋಟೊ ಸೇಷನ್ ಕ್ಯಾನ್ಸಲ ಮಾಡಿದ್ದು ತಮಗೆ ತಿಳಸಿಲ್ಲ ತಮಗ ಮಿಸ್ ಗೈಡ್ ಮಾಡಿದ್ದಾರೆ ಎಂದು ಪಾಲಿಕೆ ಸದಸ್ಯರು ಆಕ್ರೊಷ ವ್ಯೆಕ್ತ ಪಡಿಸಿದ್ದಾರೆ ಇನ್ನು ಸುದ್ದಿಘೊಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಪ ಹಳ್ಳೊರ .ಆರೀಪ ಭದ್ರಾಪುರ .ಇಮ್ರಾನ್ ಎಲಿಗಾರ, ಪ್ರಕಾಶ ಬುರಬುರೆ, ಸಂದಿಲ್ ಕುಮಾರ
ಇಲಿಯಾಸ್ ಮುನಿಯಾರ ಸಹಿತ ಅನೇಕ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು