Uncategorized

ಇಬ್ಬರ ಬಂಧನ ಲಕ್ಷಾಂತರ ಮೌಲ್ಯದ ಬಂಗಾರ ವಶ

ಉಪನಗರ ಪೊಲೀಸರಿಂದ ಅನಧಿಕೃತ ಬಂಗಾರ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂದಿಸಿದ್ದಾರೆ..
ಗುಜರಾತ್ ಮೂಲದ ಮನೀಶ ಹಿಮ್ಮತಲಾಲ ಸೋನಿ ಹಾಗು ದರ್ಶನ್ ದಾಖಲಾತಿ ಇಲ್ಲದ ಗಟ್ಟಿ ಬಂಗಾರವನ್ನು ತಂದು ಹುಬ್ಬಳ್ಳಿಯಲ್ಲಿ ಮಾರಾಟ ಮಾಡುತ್ತಿದ್ದು ಖಚಿತ ಮಾಹಿತಿ ಮೇರೆಗೆ ಉಪನಗರ ಪೊಲೀಸರು ಬಂಧಿಸಿದ್ದಾರೆ..

ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದ ಹತ್ತಿರ ಇಬ್ಬರನ್ನು ಬಂದಿಸಿ ಅವರಿಂದ 818.030 ಮೀಲಿ ಗ್ರಾಂ ತೂಕದ ಸುಮಾರು 36.81.135 ರೂ ಮೌಲ್ಯದ ಗಟ್ಟಿ ಬಂಗಾರವನ್ನು

ವಶಪಡಿಸಿಕೊಂಡಿದ್ದಾರೆ..ದಾಖಲಾತಿ ಇಲ್ಲದೆ ಬಂಗಾರ ಮಾರಾಟ ಮಾಡಲು ಬಂದು ಪೊಲೀಸ್ ಕೈಗೆ ತಗಲಾಕೊಂಡ ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ…

ಇನ್ನು ಈ ಒಂದು ಕಾರ್ಯಾಚರಣೆ ಯನ್ನು ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ರವಿಚಂದ್ರ ಡಿ ಬಿ, ನೇತೃತ್ವದಲ್ಲಿ ಕವಿತಾ ಎಸ್ ಎಮ್ ಪಿಎಸ್‌ಐ (ಅವಿ) ಮತ್ತು ಸಿಬ್ಬಂದಿ ಜನರಾದ ಮಲ್ಲಿಕಾರ್ಜುನ ಧಣಿಗೊಂಡ, ಮಂಜುನಾಥ, ಯಕ್ಕಡಿ, ಶ್ರೀನಿವಾಸ ಯರಗುಪಿ, ಕೃಷ್ಣಾ ಮೊಟಬೆನೂರ, ಮಂಜುನಾಥ ಹಾಲವರ ಪ್ರಕಾಶಕಲ ಗುಡಿ, ರೇಣಪ ಸಿಕ್ಕಲಗೇರಿ, ಮಾಬುಸಾಬ ಮುಲ್ಲಾ ಹಾಗೂ ಆರೂಢ ಕರಣ್ಣವರ, ಜ್ಞಾನೇಶ್ವರ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

Leave a Reply

Your email address will not be published. Required fields are marked *

error: Content is protected !!