ಇಬ್ಬರು ಸರಣಿ ಚಾಲಾಕಿ ಕಳ್ಳರ ಬಂದನ 3 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರ ಬೆಳ್ಳಿ ವಶ

ಹುಬ್ಬಳ್ಳಿ: ಹುಬ್ಬಳ್ಳಿಯ ಹಳೆ ಹುಬ್ಬಳ್ಳಿ ಪೊಲೀಸರು ಸರಣಿ ಮನೆ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸಿದ್ದಾರೆ ಕಳೆದ 20 ದಿನದ ಹಿಂದೆ ಎರಡು ಮನೆ ಕಳ್ಳತನ ವಾಗಿದ್ದು ಹಳೆ ಹುಬ್ಬಳ್ಳಿಯ ಪೊಲೀಸ ಇನ್ಸಪೆಕ್ಟರ ರಾಘವೇಂದ್ರ ಹಳ್ಳೊರ ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಿದಾಗ ಚಾಲಾಕಿ ಸರಣಿ ಕಳ್ಳರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳ್ಳತನ ವಾದ ಬಗ್ಗೆ ತನಿಖೆ ನಡೆಸುತಿದ್ದಾಗ ವೃತ್ತಿಯಲ್ಲಿ ಇಬ್ಬರು ವೆಲ್ಡಿಂಗ ಹಾಗು ಆಟೋ ಡ್ರೈವರ್ ಆದ್ರೆ ರಾತ್ರಿ ಆದ್ರೆ ಇವರು ಕಳ್ಳತನ ಮಾಡುತ್ತಿದ್ದು

ಈ ಇಬ್ಬರು ಕಳ್ಳರನ್ನು ಬಂಧಿಸಿ ವಿಚಾರಣೆ ನಡೆಸಿದಾಗ. ಎರಡು ಕಡೆ ಕಳ್ಳತನ ಮಾಡಿದ್ದು ಅವರಿಂದಾ 66350 ಮೌಲ್ಯದ ಬಂಗಾರದ ವಡವೆಗಳು ಮತ್ತು 291450 ಮೌಲ್ಯದ 33650 ಗ್ರಾಂ ಬೆಳ್ಳಿಯ ವಸ್ತುಗಳ ಸಹಿತ ಒಂದು ಹೊಂಡಾ ಬೈಕನು ಒಟ್ಟು ಮೌಲ್ಯ 331450 ವಸ್ತುಗಳನ್ನು.ಪೋಲಿಸರು ವಶಪಡಿಸಿಕೊಂಡಿದ್ದು

ಬಂಧಿತರಾದ ವೆಲ್ಡಿಂಗ ಮಾಡುತ್ತಿದ್ದ ಇಮ್ರಾನ್ ಕಲಾದಗಿ ಹಾಗು ಆಟೋ ರಿಕ್ಷಾ ಡ್ರೈವರ್ ಆದ ತೌಸಿಫ ಅಹ್ಮದ ಮುಲ್ಲಾ ಈ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ

ಇನ್ನು ಈ ಪ್ರಕರಣವನ್ನು ಪೊಲೀಸ್ ಆಯುಕ್ತರದ ಲಾಬೂರಾಮ್ ಇವರ ನೇತೃತ್ವದಲ್ಲಿ ಡಿಸಿಪಿಗಳಾದ ಸಾಹಿಲ ಬಾಗ್ಲಾ .ಗೋಪಾಲ ಎಮ್ ಬ್ಯಾಕೋಡ .ಎಸಿಪಿ ಪಾಟೀಲರ ಮಾರ್ಗದರ್ಶನದಲ್ಲಿ

ಹಳೆ ಹುಬ್ಬಳ್ಳಿಯ ಠಾಣೆಯ ಇನ್ಸಪೆಕ್ಟರ ಆದ ರಾಘವೇಂದ್ರ ಹಳ್ಳೂರ ಇವರ ನೇತೃತ್ವದಲ್ಲಿ ಪಿಎಸಐ ಶಿವಾನಂದ ಬನ್ನಿಕೊಪ್ಪಾ . ಭಜಂತ್ರಿ .ಎ ಎಸ ಐ ಕಾಳೆ ಹಾಗು ಸಿಬ್ಬಂದಿಗಳಾದ ಸುನೀಲ್ ಪಾಂಡೆ. ಸಂಶಿ. ಕಟನಳ್ಳಿ. ನಧಾಪ . ಸಂತೋಷ. ಉಮೇಶ್ ಹುದ್ದೆರಿ. ನಾಗರಾಜ. ಅರುಣ್. ವಿನೋದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದ ಎಲ್ಲಾ ಸಿಬ್ಬಂದಿಯ ಕಾರ್ಯವೈಖರಿಯನ್ನು ಮೆಚ್ಚಿ ಪೊಲೀಸ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.
