ಹುಬ್ಬಳ್ಳಿ ಪಾಲಿಕೆ ಸಾಮಾನ್ಯ ಸಭೆ ಗೌನ್ ಗದ್ದಲಕ್ಕೆ ಬಲಿಯಾಯ್ತು.

ಛೋಟಾ ಮುಂಬಯಿ ಅಂತಾ ಕರೆಯಿಸಿಕೊಳ್ಳುವ ಅವಳಿ ನಗರದ ಜ್ವಲಂತ ಸಮಸ್ಯೆ ಬಗ್ಗೆ ಚರ್ಚೆಯಾಗಬೇಕಿತ್ತು. ನಗರದ ಸಮಸ್ಯೆಗಳ ಪರಿಹಾರಕ್ಕೆ ಆ ಪಾಲಿಕೆಯಲ್ಲಿ ಸಭೆ ಕರೆಯಲಾಗಿತ್ತು. ಆದ್ರೆ ಆ ಸಭೆಯಲ್ಲಿ ಯಾವುದೇ ಒಂದು ಸಮಸ್ಯೆ ಚರ್ಚೆಯಾಗಲಿಲ್ಲ. ಆದ್ರೆ ಅಲ್ಲಿ ಚರ್ಚೆಯಾಗಿದ್ದು, ಮೇಯರ್ ಧರಿಸುವ ಗೌನ್. ಗೌನ್ ಹಾಕದೆ ಬಂದ ಮೇಯರ್ ವಿರುದ್ಧ ವಿರೋಧ ಪಕ್ಷದ ನಾಯಕರು ದೊಡ್ಡ ಗಲಾಟೆಯನ್ನೇ ಮಾಡಿದ್ರು. ಗೌನ್ ಗಲಾಟೆಗೆ ಇಡೀ ಸಾಮಾನ್ಯ ಸಭೆಯೇ ಬಲಿಯಾಯ್ತು
ಹುಬ್ಬಳ್ಳಿ ಧಾರವಾಡ ಅವಳಿ ನಗರ ಪಾಲಿಕೆ ರಾಜ್ಯದ ಎರಡನೇ ದೊಡ್ಡ ಪಾಲಿಕೆ. ಈ ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿಗೆ. ನಗರದಲ್ಲಿ ಬೀದಿದೀಪ, ಕುಡಿಯೋ ನೀರಿನ ಸಮಸ್ಯೆ ಇನ್ನು ಬಗೆಹರದಿಲ್ಲ.ಆದ್ರೆ ಇದೇ ಪಾಲಿಕಯೆಲ್ಲಿ ಆಡಳಿತ ನಡೆಸೋ ಜನ ಪ್ರತಿನಿಧಿಗಳು ಗೌನ್ ಹಿಂದೆ ಬಿದ್ದಿದ್ದಾರೆ. ಇಂದು ಹುಬ್ಬಳ್ಳಿ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಕರೆದ ಸಾಮಾನ್ಯ ಸಭೆ ಗೌನ್ ಗದ್ದಲಕ್ಕೆ ಬಲಿಯಾಯ್ತು. ಒಂದು ಕಡೆ ಪಾಲಿಕೆ ಆಯುಕ್ತ ಈರೇಶ್ ಅಂಚಟಗೇರಿ ವಿರುದ್ದ ದಿಕ್ಕಾರ ಘೋಷಣೆ. ಮೇಯರ್ ಗೌನ್ ಹಾಕದೆ ಇರೋದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿರೋ ಕೈ ಪಾಲಿಕೆ ಸದಸ್ಯರು.ಮೇಯರ್ ಬಾರಿಸೋ ಗಂಟೆಯನ್ನೆ ಕಿತ್ತುಕೊಂಡು ಹೋದ ಕಾಂಗ್ರೆಸ್ ಪಾಲಿಕೆ ಸದಸ್ಯ. ಇದೆಲ್ಲ ಹೈಡ್ರಾಮಾಕ್ಕೆ ಕಾರಣವಾಗಿದ್ದು ಮೇಯರ್ ಹಾಕೋ ಗೌನ್.
ಇಂದು ಪಾಲಿಕೆ ಸದಸ್ಯರ ಸಾಮಾನ್ಯ ಸಭೆ ಕರೆಯಲಾಗಿತ್ತು. ಆದ್ರೆ ಸಭೆಗೆ ಮೇಯರ್ ಈರೇಶ್ ಅಂಚಟಗೇರಿ ಗೌನ್ ಹಾಕದೆ ಬಂದಿದ್ರು. ಇದರಿಂದ ರೊಚ್ಚಿಗೆದ್ದ ಕೈ ಸದಸ್ಯರು ಪಾಲಿಕೆ ಸಭಾಂಗಣದಲ್ಲಿ ಗಲಾಟೆ ಮಾಡಿದ್ರು.ಸಭೆಯ ಆರಂಭದಲ್ಲಿಯೇ ಕೈ ಸದಸ್ಯರು ಪಾಲಿಕೆಯಲ್ಲಿ ಕೋಲಾಹಲ ಎಬ್ಬಸಿದ್ರು.
ಮೇಯರ್ ಜಾಕೆಟ್ ಹಾಕಿ ಬರುತ್ತಲೇ ಗೌನ್ ಎಲ್ಲಿ ಎಂದು ಕೈ ಸದಸ್ಯರು ಮೇಯರ್ ಜೊತೆ ಜಟಾಪಟಿ ನಡೆಸಿದ್ರು.ಕೆಲ ಕಾಲ ಪಾಲಿಕೆಯಲ್ಲಿ ಮೇಯರ್ ಹಾಗೂ ಕೈ ಸದಸ್ಯರ ನಡುವೆ ವಾಕ್ಸಮರ್ ಜೋರಾಗಿತ್ತು. ಕೊನೆಗೆ ಬಿಜೆಪಿ ಸದಸ್ಯರು ಸಾಮಾನ್ಯ ಸಭೆ ತಿರಸ್ಕಾರ ಮಾಡಿ ಹೋದ್ರೆ, ಇತ್ತ ಕೈ ಸದಸ್ಯರು ಸಭೆ ಆಗಲಬೇಕು ಎಂದು ಪಟ್ಟು ಹಿಡದಿದ್ರು.ಕೈ ಸದಸ್ಯರ ಜಟಾಪಟಿ ಆರಂಭಿಸುತ್ತಲೇ ಮೇಯರ್ ಈರೇಶ್ ಅಂಚಟಗೇರಿ ಹೊರಟು ಹೋದ್ರು.
ಮೇಯರ್ ಹೋದ ಬಳಿಕ ಕೆರಳಿದ ಕೈ ಸದಸ್ಯರು ಪಾಲಿಕೆಯಲ್ಲಿ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅರ್ದಗಂಟೆ ಸಭೆ ಮುಂದೂಡಲಾಗಿತ್ತು.ಅರ್ದ ಗಂಟೆ ಬಳಿಕ ಸಭೆ ಆರಂಭವಾದ್ರೂ ಮೇಯರ್ ಮಾತ್ರ ಗೌನ್ ಜಿದ್ದಿಗೆ ತಗೆದುಕೊಂಡಂತೆ ಕಾಣತ್ತೆ,ಹೀಗಾಗಿ ವಾಪಸ್ ಸಭೆ ಆರಂಭವಾದರೂ ಗೌನ್ ಹಾಕಿರಲಿಲ್ಲ.ಈ ವೇಳೆ ಮತ್ತೆ ಮಾತಿಗೆ ಮಾತು ಬೆಳೀತು.ಈ ಸಮಯದಲ್ಲಿ ಮೇಯರ್ ಬಾರಿಸೋ ಗಂಟೆಯನ್ನ ಕೈ ಸದಸ್ಯ ಕಿತ್ತುಕೊಂಡು ಹೋಗಿದ್ದು ನೆರೆದವರಿಗೆ ಫ್ರೀ ಕಾಮಿಡಿ ಶೋ ನೋಡಿದಂತೆ ಇತ್ತು.ಗೌನ್ ವಿಚಾರಕ್ಕೆ ಜಿದ್ದಿಗೆ ಬಿದ್ದ ಮೇಯರ್ ಒಬ್ಬ ಹಿಟ್ಲರ್ ಎಂದು ಕೈ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.