ಚಾಕುವಿನಿಂದ ಯುವ ಕಾಂಗ್ರೆಸ್ ಮುಖಂಡನ ಮೇಲೆ ಮಾರಾಣಾಂತಿಕ ಹಲ್ಲೆ!

ಹುಬ್ಬಳ್ಳಿ : ಮನೆಯ ಬಳಿ ನಿಲ್ಲ ಬೇಡ ಎನ್ನುವ ಕಾರಣಕ್ಕೆ ವ್ಯಕ್ತಯೋರ್ವನ ಮೇಲೆ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ ಘಟನೆ ಇಲ್ಲಿನ ಸೋನಿಯಾ ಗಾಂಧಿನಗರದ ನಿಜಾಮುದ್ದಿನ ಟೌನ್ ನಲ್ಲಿ ನಡೆದಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಕಾಂಗ್ರೆಸ್ ಯುವ ಮುಖಂಡ ತೌಸಿಪ್ ಲಕ್ಕುಂಡಿ ಎಂದು ಗುರುತಿಸಲಾಗಿದೆ.
ಇತ್ತೀಚೆಗಷ್ಟೇ ನಿಜಾಮುದ್ದಿನ ಟೌನ್ ನಲ್ಲಿ ಮನೆಮಾಡಿದ್ದ ತೌಸಿಫ್ ಲಕ್ಕುಂಡಿಯ ಮನೆಯ ಆವರಣದ ಬಳಿ ಪದೆ ಪದೆ ಬಂದು ನಿಲ್ಲುತ್ತಿದ್ದ ಅದೆ ಪ್ರದೇಶದ ಯುವಕ ಇಸ್ಮಾಯಿಲ್ ಗೆ ತೌಸಿಫ್ ಪ್ರಶ್ನಿಸಿದ್ದ. ಆದರೆ ಇದನ್ನೆ ವೈರತ್ವ ವಾಗಿ ತೆಗೆದುಕೊಂಡ ಇಸ್ಮಾಯಿಲ್ ಇನ್ನಿತರೊಂದಿಗೆ ನಿನ್ನೆ ರಾತ್ರಿ ತೌಸೀಪ್ ನನ್ನು ಮನೆಯಿಂದ ಆಚೆ ಕರೆದು ಚಾಕುವಿನಿಂದ ಹಲ್ಲೆ ನಡೆಸಿ ಎಡಗಾಲಿನ ನರ ಕಟ್ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ತೌಸೀಫ್ ನನ್ನು ಪೊಲೀಸರು ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರಗೆ ದಾಖಲಿಸಿದ್ದಾರೆ.
ಘಟನೆಗೆ ಸಂಭಂದಿಸಿದಂತೆ ಈಗಾಗಲೆ ಇಸ್ಮಾಯಿಲ್ ಎಂಬ ದುಷ್ಕರ್ಮಿಯನ್ನು ವಶಕ್ಕೆ ಪಡೆದಿರುವ ಬೆಂಡಿಗೇರಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸ್ಥಳಕ್ಕೆ ಭೆಂಡಿಗೇರಿ ಪೊಲೀಸರು ಭೇಟಿ ನೀಡಿದ್ದು ಘಟನೆ ಕುರಿತು ಇನ್ನುಳಿದ ಆರೋಪಿಗಳಿಗೆ ಬಲೆ ಬಿಸಿದ್ದಾರೆ.