ಹುಬ್ಬಳ್ಳಿಯಲ್ಲಿ ಅರ್ಥಪೂರ್ಣವಾಗಿ ನೇರವೇರಿದ ಶುಭ ಶುಕ್ರವಾರ…!! ಕ್ರೈಸ್ತ ಸಮೂದಾಯದಿಂದ ಅದ್ದೂರಿ ಮೆರವಣಿಗೆ…

ಹುಬ್ಬಳ್ಳಿಯಲ್ಲಿ ಶಾಂತಿಯುತವಾಗಿ ಆಚರಿಸಿದ ಗುಡ ಫ್ರೈಡೆ
ಇಲ್ಲಿನ ಗದಗ ರಸ್ತೆಯ ಕ್ರಿಶ್ಚಿಯನ್ ಮೈನಾರಿಟಿ ವೆಲ್ಫೇರ್ ಅಸೋಸಿಯೇಷನ್ (ರಿ) ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಶುಭ ಶುಕ್ರವಾರ ಆರಾಧನೆಯ ನಿಮಿತ್ತವಾಗಿ ಕಳೆದ ಏ.19 ರಂದು ಶಾಂತಿ ಮೆರವಣಿಗೆ ನಡೆಸಲಾಯಿತು.
ಇನ್ನು ಶುಭ ಶುಕ್ರವಾರ ಕ್ರೈಸ್ತರಿಗೆ ಪವಿತ್ರವಾದ ದಿನವಾಗಿದೆ. ಕ್ರಿಸ್ ಮಸ್ ಯೇಸುಕ್ರಿಸ್ತನ ಜನನವನ್ನು ಸೂಚಿಸಿದರೇ, ಶುಭ ಶುಕ್ರವಾರವು ಯೇಸುಕ್ರಿಸ್ತನ ಮರಣದ ಸಂಕೇತಿಸುತ್ತದೆ.
ಈ ದಿನವನ್ನು ಕಪ್ಪು ಶುಕ್ರವಾರ, ಪವಿತ್ರ ಶುಕ್ರವಾರ, ದೊಡ್ಡ ಶುಕ್ರವಾರ ಇತ್ಯಾದಿ ಹೆಸರುಗಳಿಂದಲೂ ಕರೆಯಲಾಗುತ್ತದೆ.
ಇನ್ನು ಪವಿತ್ರ ಸಪ್ತಾಹದ ಅಂಗವಾದ ಶುಭ ಶುಕ್ರವಾರವು ಯೆಹೂದ್ಯರ ಆಚರಣೆಯಾದ ಒಂದು ದಿನವಾಗಿದೆ. ಈ ಒಂದು ಶಾಂತಿ ಮೆರವಣಿಗೆಯು ಗದಗ ರಸ್ತೆಯ ಯಲಕಯ್ಯಾ ಚಿರ್ಲ್ಡನ್ಸ್ ಪಾರ್ಕದಿಂದ ಪ್ರಾರಂಭವಾಗಿ, ಡಾ.ಬಿ. ಆರ್. ಅಂಬೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕಿತ್ತೂರ ರಾಣಿಚೆನ್ನಮ್ಮ ವೃತ್ತ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾರ್ಗವಾಗಿ ಮತ್ತೆ ಯಲಕಯ್ಯಾ ಚಿಲ್ಡ್ರನ್ಸ್ ಪಾರ್ಕನಲ್ಲಿ ಮುಕ್ತಾಯಗೊಂಡಿತು.

ಈ ಒಂದು ಶಾಂತಿ ಮೆರವಣಿಗೆಯಲ್ಲಿ ಸಾವಿರಾರು ಕ್ರೈಸ್ತ ಧರ್ಮದ ಬಾಂಧವರು ಪಾಲ್ಗೊಂಡು, ಯೇಸುವಿನ ಕಲಾಕೃತಿಗಳು ಮೂರ್ತಿಗಳ ಸ್ಥಬ್ಧ ಚಿತ್ರಗಳನ್ನು ಪ್ರದರ್ಶಿಸಿದರು. ಈ ಮೂಲಕ ಶಾಂತಿ ಸಂದೇಶವನ್ನು ಸಾರಿದರು.
ಇನ್ನು ಈ ಒಂದು ಶಾಂತಿ ಮೆರವಣಿಗೆಯಲ್ಲಿ ಉತ್ತರ ಕರ್ನಾಟಕದ ಡಿಜೆ ಹೆಸರಾದಂತಹ ಸ್ಟ್ಯಾನ್ಲಿ ಸೌಂಡ್ ಸಿಸ್ಟಮ್ ನಿಂದ ಯೇಸುವಿನ ಭಕ್ತಿ ಗೀತೆಗಳು ಮನಸೂರ ಗೊಂಡಿತು. ಈ ಒಂದು ಕಾರ್ಯಕ್ರಮದಲ್ಲಿ ಡಾ. ಲಾಜರಸ್ ಲುಂಜಳಾ ರೆವ್, ಸೆಡ್ರಿಕ್ ಹಾಕೋವಿ ರೆವ್, ಎಡ್‌ವರ್ಡ ಗೌಡರ ರೆವ್, ಗಾಬ್ರಿಯಲ್ ಗಾಂಧಿ, ಇಮ್ಯಾನುವೆಲ್ ಪಿ.. ಪಾ. ಎಸ್.ಜಿ. ಪೀಟರ್, ಪಾ. ಕೆ. ಓಬುಲ್ ರಾವ್, ಪಾ. ಡ್ಯಾನಿಯಲ್ ಪೆಂಡೆಮ್ ಸಹಿತ ಸಾವಿರಾ ಕ್ರೈಸ್ತ ಬಾಂಧವರು ಪಾಲ್ಗೊಂಡಿದ್ದರು.