ಚುನಾವಣೆ ಅಖಾಡ ಸಜ್ಜಾಗುವ ಮುನ್ನವೇ ಜೋರಾಗುತ್ತಿದೆ ಛಬ್ಬಿ ಕುಕ್ಕರ್ ಸಿಟಿ ಜೋರೂ

ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಐದಾರು ತಿಂಗಳು ಬಾಕಿ ಇವೆ. ಈಗಲೇ ಧಾರವಾಡ ಜಿಲ್ಲೆಯಲ್ಲಿ ಅಲ್ಲಲ್ಲಿ ಮತದಾರರನ್ನ ಸೆಳೆಯಲು ಅನೇಕ ಕಸರತ್ತು ನಡೆದಿವೆ. ಒಂದು ಸಮುದಾಯ ಒಲಿಸುವಿಕೆ ಆಯಕಟ್ಟಿನ ಸ್ಥಳ ಹುಡುಕಾಟ, ಮತದಾರರ ಮನವೊಲಿಸಲು ಆಶೆ ಆಮಿಷ ಹೀಗೆ ಒಂದಲ್ಲಾ ಎರಡಲ್ಲ ಅನೇಕ ರೀತಿಯ ಒಲೈಕೆ ರಾಜಕಾರಣಕ್ಕೆ ನಾಂದಿಯಾಗಿದೆ ಧಾರವಾಡ ಜಿಲ್ಲೆ.
ಈಗ ಜಿಲ್ಲೆಯಲ್ಲಿಯೇ ಹೈಲ್ಟೋಜ್ ಕ್ಷೇತ್ರ ಎಣಿಸಿಕೊಂಡಿರುವ ಕಲಘಟಗಿಯಲ್ಲಿ ಈಗ ಕುಕ್ಕರಿನ ಸಿಟಿಯದ್ದೇ ದೊಡ್ಡ ಸದ್ದು ಮಾಡುತ್ತಿದ್ದು. ಕಲಘಟಗಿ ತಾಲೂಕು ಹಿರೇ ಹೊನ್ನಳ್ಳಿ ಗ್ರಾಮದಲ್ಲಿ ನಾಗರಾಜ್ ಛಬ್ಬಿ ಕುಕ್ಕರ್ ವಿತರಣೆ ಮಾಡುತ್ತಿದ್ದು.
ಕಲಘಟಗಿ ಮತಕ್ಷೇತ್ರದ ಕಲಘಟಗಿ ಮತ್ತು ಅಳ್ನಾವರ ಭಾಗಕ್ಕೆ ಸುಮಾರು 80 ಸಾವಿರ ಕುಕ್ಕರ್ ಪ್ರತಿಯೊಂದು ಹಳ್ಳಿಯಲ್ಲೂ ಮನೆಮನೆಗೂ ದೀಪಾವಳಿ ಕೊಡುಗೆ ಎಂದು ನೀಡಲಾಗಿದೆ.

ಅನೇಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕುಕ್ಕರ್ ವಿತರಣೆಯ ಮಾಡಿದ್ದಾರೆ. ಈ ರೀತಿಯಲ್ಲಿ ಛಬ್ಬಿ ಅವರು ಹೋದ ಚುನಾವಣೆಯಲ್ಲಿ ಸೀರೆಯನ್ನು ಹಂಚಿ ಸುದ್ದಿಆಗಿದ್ದು ಎಲ್ಲರಿಗೂ ಗೊತ್ತಿದ್ದ ವಿಷಯ. ಇನ್ನು ಚುನಾವಣೆಗೆ ೬ ತಿಂಗಳು ಬಾಕಿ ಇರುವಾಗ ಮತದಾರರನ್ನು ಓಲೈಸುವ ಸಲುವಾಗಿ ಪ್ರತಿ ಹಳ್ಳಿಯ ಪತ್ರಿ ಮನೆ ಮನೆಗೂ ಕುಕ್ಕರ ಹಂಚುವ ಮೂಲಕ ಮತದಾರರನ್ನು ಸೆಳೆಯಲು ಇನ್ನಿಲದ ಕಸರತ್ತು ನಡೆಸಿದ್ದಾರೆ