Uncategorized

H.NO  “113” ರಹಸ್ಯ ಭೇದಿಸಿದ ಅಶೋಕ ನಗರ ಠಾಣೆಯ ಪೊಲೀಸರು

ನಗರದ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ, ಮನೆ ಕಳ್ಳತನ ಮಾಡುತ್ತಿದ್ದ ಮನೆಗಳ್ಳಿ ಹಾಗೂ ಕೃತ್ಯಕ್ಕೆ ಸಹಕರಿಸಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಅಶೋಕ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಮಹಿಳೆ ಸೆ.16 ರಂದು ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಯನಗರದ ಮನೆ ನಂಬರ್ 113 ರಲ್ಲಿ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಕಳ್ಳತನ ಮಾಡಿರುವುದಾಗಿ ಮನೆ ಮಾಲಕಿ ಸುಜಾತಾ ದೂರು ದಾಖಲಿಸಿದ್ದರು.

ಬಂಧಿತರನ್ನು ಗಂಗಾಧರನಗರದ ನಿವಾಸಿ ರತ್ನವ್ವ ಬಾಳಿಮೇಡ್ (45), ಕುಸುಗಲ್ ನಿವಾಸಿ ಮುಕ್ತುಂಸಾಬ್ ಕುಂಬಿ (27) ಗುರುತಿಸಲಾಗಿದೆ. ಇವರಿಂದ 2.50 ಲಕ್ಷ ರೂ ಮೌಲ್ಯದ 50 ಗ್ರಾಂ ತೂಕದ 4 ಬಂಗಾರದ ಬಳೆಗಳು, 50 ಸಾವಿರ ಮೌಲ್ಯದ 10 ಗ್ರಾಂ ತೂಕದ ಬಂಗಾರದ ಚೈನು, 50 ಸಾವಿರ ರೂ ಮೌಲ್ಯದ 6 ಜೊತೆ 12 ಕಿವಿಯೋಲೆ, 1.50 ಲಕ್ಷ ರೂ ಮೌಲ್ಯದ ಬಂಗಾರದ ಪದಕ ಮತ್ತು ಎರಡು ತೊಡೆಗಳು, ಇತರೆ 10 ಗ್ರಾಂ ಬೆಳ್ಳಿ ಆಭರಣ, ಬಳೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 5.33 ಲಕ್ಷ ರೂ ಎಂದು ಅಂದಾಜಿಸಲಾಗಿದೆ.

ಇನ್ನು ಬಂಧಿತ ಮಹಿಳೆಯು ಮುಂಜಾನೆ ಬೀದಿ ಬೀದಿ ಅಲೆದು ಕಸ ಆರಿಸುವು ನೆಪದಲ್ಲಿ ಯಾವ ಮನೆಗೆ ಬಿಗ್ ಹಾಕಿದ್ದಾರೆ ಅಂತಾ ಗಮನಿಸಿ ಕಳ್ಳತನ ಮಾಡುತ್ತಿದ್ದಳು ಅಂತಾ ತನಿಖೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ .

ಕಳ್ಳತನದ ಜಾಡು ಹಿಡಿದು ಬೆನ್ನತ್ತಿದ ಅಶೋಕ ನಗರ ಠಾಣೆಯ ಪಿಐ ಮಂಜುನಾಥ ಟಿ.ಎಮ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರ.

ಹು-ಧಾ ಪೊಲೀಸ ಆಯುಕ್ತರಾದ ಎನ್.ಶಶಿಕುಮಾರ ಡಿಸಿಪಿ ಮಹಾನಿಂಗ್ ನಂದಗಾಮಿ ಡಿಸಿಪಿ ರವೀಶ್. ಸಿ.ಆರ. ಮತ್ತು ಹುಬ್ಬಳ್ಳಿ ಉತ್ತರ ಉಪ ವಿಭಾಗದ ಎಸಿಪಿ ರವರಾದ ಶಿವಪ್ರಕಾಶ ನಾಯಕ. ಮಾರ್ಗದರ್ಶನದಲ್ಲಿ ಅಶೋಕನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟ‌ರ್ ಕಿರಣಕುಮಾರ ಎಸ್.ಟಿ ಇವರ ನೇತೃತ್ವದಲ್ಲಿ ಅಶೋಕನಗರ ಠಾಣೆಯ ಮಂಜುನಾಥ ಟಿ.ಎಮ್. ಪಿ.ಎಸ್.ಐ ಶ್ರೀಮತಿ ಎನ್.ಎಮ್ ಮನಿಯಾರ ಹಾಗು ಸಿಬ್ಬಂದಿಗಳಾದ ಎಸ್.ಎಚ್. ಪಾಟೀಲ, ವಾಯ.ಬಿ.ಮೂರಬ, ರಾಜೇಂದ್ರ ಸಕ್ರೆಪ್ಪಗೋಳ,ವಿರೇಶ ಮಹಾಜನಶೆಟ್ರ, ಶಂಬುಲಿಂಗ ಈರೇಶನವರ, ಎ.ಐ ಚವರಿ, ಮತ್ತು ಗುರವ ಅವರುಗಳು ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದು ಇನ್ನು ಪೊಲೀಸ ಆಯುಕ್ತರು ಅಶೋಕ ನಗರ ಪೊಲೀಸರನ್ನು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!