ಇಸ್ಪೇಟು ವಿಚಾರಕ್ಕೆ ಠಾಣೆ ಮುಂದೆ ಪೊಲೀಸನಿಗೆ ಚಾಕು ಇರಿತ

ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಪೇದೆ ಯೊಬ್ಬರಿಗೆ ಚಾಕು ಇರಿದ ಘಟನೆ ಹುಬ್ಬಳ್ಳಿಯ ಬಂಡಿವಾಡ ದಲ್ಲಿ ನಡೆದಿದೆ.ಗ್ರಾಮದ ಹೊರ ಪೊಲೀಸ್ ಠಾಣೆಯಲ್ಲಿ ಈ ಒಂದು ಘಟನೆ ನಡೆದಿದ್ದು ಕರ್ತವ್ಯದ ಮೇಲಿದ್ದ ಪೊಲೀಸನಿಗೆ ಚಾಕುವನ್ನು ಹಾಕಲಾಗಿದೆ

ಪೊಲೀಸ್ ಠಾಣೆಗೆ ನುಗ್ಗಿ ಚಾಕು ಇರಿದಿದ್ದಾನೆ ಯುವಕ ಇಸ್ಪೀಟು ಆಡುವ ವಿಚಾರಕ್ಕೆ ತಿಳಿ ಹೇಳಿದ್ದೇ ತಡ ರೊಚ್ಚಿಗೆದ್ದ ಸುರೇಶ ಚಾಕು ಇರಿತ ಮಾಡಿದ್ದಾನೆ.

ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಬಂಡಿವಾಡ ಗ್ರಾಮದಲ್ಲಿನ ಹೊರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು ಚಾಕು ಹಾಕಿದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಹೊರ ಪೊಲೀಸ್ ಠಾಣೆ ಇದಾ ಗಿದ್ದು ಠಾಣೆಗೆ ನುಗ್ಗಿ ಪೊಲೀಸ್ ಪೇದೆ ಮಹಾಂತೇಶ ಮಡ್ಡಗೋಳ ಗೆ ಚಾಕು ಇರಿತವನ್ನು ಮಾಡಲಾಗಿದೆ.

ಎರಡು ದಿನಗಳ ಹಿಂದೆ ಗ್ರಾಮದಲ್ಲಿ ಇಸ್ಪೀಟು ಆಡುವ ವಿಚಾರಕ್ಕೆ ತಿಳಿ ಹೇಳಿದ್ದ ಪೊಲೀಸ್ ಪೇದೆ.ಸಿಟ್ಟಿಗೆದ್ದು ಠಾಣೆಗೆ ನುಗ್ಗಿ ಚಾಕು ಇರಿದ ಸುರೇಶ ಬಂಡವಾಡ.ಸುರೇಶ ಬಂಡವಾಡ ಅದೇ ಗ್ರಾಮದ ಯುವಕನಾಗಿದ್ದು ಈ ಮೊದಲು ಕೂಡಾ ಪೊಲೀಸನಿಗೆ ಬೈಕ ಹಾಕಿ ಹತ್ಯೆ ಮಾಡಲು ಸಹ ಮುಂದಾಗಿದ್ದ ಅಂತಾ ಅಲ್ಲಿನ ಸ್ಥಳಿಯರು ಹೇಳುತ್ತಿದ್ದು ಸಧ್ಯ ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಪೇದೆಯನ್ನು ದಾಖಲು ಮಾಡಿರುವ ಪೊಲೀಸರು ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಎದೆ ಸೇರಿದಂತೆ ಹಲವು ಕಡೆಗಳಲ್ಲಿ ಚಾಕು ಇರಿತ ವನ್ನು ಮಾಡಲಾಗಿದೆ.ಸಧ್ಯ ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿರುವ ಗ್ರಾಮೀಣ ಪೊಲೀಸರು ಆರೋಪಿ ಸುರೇಶನನ್ನು ಬಂಧನ ಮಾಡಿದ್ದು ಇನ್ನೇಕ್ಟರ್ ರಮೇಶ ಗೋಕಾಕ ಮತ್ತು ಟೀಮ್ ಕೇಸ್ ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.