ಗಾಂಜಾ ಗಾಟಿಗೆ ಬ್ರೇಕ್ ಹಾಕಿದ ಹುಬ್ಬಳ್ಳಿ ಪೋಲಿಸರು…! ಇಬ್ಬರು ಅಂಧರ್, ಬರೋಬರಿ 16 ಕೆಜಿ ಗಾಂಜಾ ವಶ

ಹುಬ್ಬಳ್ಳಿಯಲ್ಲಿ ಮತ್ತೆ ಗಾಂಜಾ ವಾಸನೆ ಹೆಚ್ಚಾಗುತ್ತಿದೆ ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರು ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ಬಂದಿಸಿದ್ದಾರೆ

ಖಚಿತ ಮಾಹಿತಿ ಮೇರೆಗೆ ಚಾಟ್ನಿಮಠ ಕ್ರಾಸ ಹತ್ತಿರ ಅನಂತ ಥಾವರೆ ಹಾಗು ನಾಗನಾಥ ಗಾಯಕವಾಡ ಎಂಬ ಮಹಾರಾಷ್ಟ್ರ ಮೂಲದ ಇಬ್ಬರು ವ್ಯೆಕ್ತಿಗಳು ಗಾಂಜಾ ಮಾರಾಟ ಮಾಡುತ್ತಿರುವಾಗ ಉಪನಗರ ಠಾಣೆಯ ಪೊಲೀಸರು ಗಾಂಜಾ ಸಮೇತ ಇಬ್ಬರನ್ನು ಬಂದಿಸಿದ್ದಾರೆ.

ಇನ್ನು ಬಂದಿತರಿಂದ ಮೂರು ಬಂಡಳಗಳಲ್ಲಿ ಇದ್ದ 80340 ರೂಪಾಯಿ ಮೌಲ್ಯದ 16 ಕೆ.ಜಿ 86 ಗ್ರಾಂ ಗಾಂಜಾ ಹಾಗು 50.000 ಸಾವಿರ ಮೌಲ್ಯದ ಒಂದು ಸ್ಯಾಂಟ್ರೋ ಕಾರನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದಾರೆ .

ಈ ಒಂದು ಕಾರ್ಯಾಚರಣೆಯನ್ನು ಪೊಲೀಸ ಆಯುಕ್ತರಾದ ಲಾಬೂರಾಮ್ .ಡಿಸಿಪಿ ಗಳಾದ ಸಾಹೀಲ ಬಾಗ್ಲಾ ಹಾಗು ಗೋಪಾಲ ಎಮ್ ಬ್ಯಾಕೋಡ ಮತ್ತು ಎಸಿಪಿ ಆದ ವಿನೋದ ಮುಕ್ತೆದಾರ ಇವರ ಮಾರ್ಗದರ್ಶನದಲ್ಲಿ

ಉಪನಗರ ಪೋಲಿಸ್ ಠಾಣೆಯ ಇನ್ಸಪೆಕ್ಟರ ರವಿಚಂದ್ರ ಡಿ ಬಿ ಇವರ ನೇತೃತ್ವದಲ್ಲಿ ಪಿ ಎಸ ಐ ಗಳಾದ ಎಸ್ ಎಮ್ ಕವಿತಾ. ಸಿ ಯು ಚಲವಾದಿ. ಇವರ ಜೊತೆಗೆ ಸಿಬ್ಬಂದಿಗಳಾದ ಎಮ್ ಬಿ ಧನಿಗೊಂಡ.ಶ್ರಿನಿವಾಸ ಯರಗುಪ್ಪಿ.ಮಂಜುನಾಥ ಯಕ್ಕಡಿ. ರೇಣಪ್ಪ ಸಿಕ್ಕಲಗೇರ. ಪ್ರಕಾಶ ಕಲಗುಡಿ. ಮಂಜುನಾಥ ಹಾಲವರ. ಎಮ್ ಎ ಅಯ್ಯನಗೌಡರ . ಕೃಷ್ಣಾ ಮೋಟೆಬೆನ್ನೂರ.ಜ್ಞಾನೇಶ್ವರ ಮಾಂಗ. ಜಗದೀಶ್ ಹಟ್ಟಿ. ಹಾಗು ಜಿ ಎಸ ವಗ್ಗನ್ನವರ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ