ಶಹರ ಪೊಲೀಸರ ಬೇಟೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯೆಕ್ತಿಯ ಬಂಧನ 629 ಗ್ರಾಂ ಗಾಂಜಾ ವಶ

ಹುಬ್ಬಳ್ಳಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರೂ ಮೈದಾನದ ಹತ್ತಿರ ಗಾಂಜಾ ಮಾರಾಟ ಜೋರಾಗಿತ್ತು ಇದರ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಶಹರ ಪೊಲೀಸ್ ಠಾಣೆ ಇನ್ಸಪೆಕ್ಟರ ಆನಂದ ಒನಕುದುರಿಯವರ ನೇತೃತ್ವದಲ್ಲಿ ಒಬ್ಬ ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದು.ಇನ್ನು ಆತನಿಂದ 629 ಗ್ರಾಂ ಗಾಂಜಾ, 600/- ರೂ ನಗದು ವಶಪಡಿಸಿಕೊಂಡು ಶಹರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ ಇನ್ನು ಈ ಒಂದು ಕಾರ್ಯಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪೊಲೀಸ ಆಯುಕ್ತರು ಮೆಚ್ಚುಗೆ ವ್ಯೆಕ್ತ ಪಡಿಸಿದ್ದಾರೆ
