ನಗು ಮುಖದ ಮುಗ್ಧ ಮನಸ್ಸಿನ ಇಂದು ಮುಂಜಾನೆಯ ಪತ್ರಿಕೆಯ ನಿರ್ದೇಶಕಿ ಪ್ರೇಮಾ ಹೂಗಾರ ವಿಧಿವಶ

ನಗು ಮುಖದ ಮುಗ್ಧ ಮನಸ್ಸಿನ ಇಂದು ಮುಂಜಾನೆ ಕಟ್ಟಿ ಬೇಳೆಸಿದ ಅಕ್ಕಾ ಅಂತಾನೆ ಎಲ್ಲರಿಗೂ ಪ್ರೀತಿಯ ಪಾತ್ರವಾಗಿದ್ದ ಪತ್ರಕರ್ತ ಗುರುರಾಜ ಹೂಗಾರ ಅವರ ಪತ್ನಿ ಇಲ್ಲಿನ ಫಾರೆಸ್ಟ್ ಕಾಲೋನಿ ನಿವಾಸಿ ಪ್ರೇಮಾ ಗುರುರಾಜ ಹೂಗಾರ(54) ಮಂಗಳವಾರ ನಿಧನರಾದರು.

ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.

ಪ್ರೇಮಾ ಹೂಗಾರ ಅವರು ಇಂದು ಮುಂಜಾನೆ ಹಾಗೂ ಸಂಜೆ ಮಾಧ್ಯಮ ಪತ್ರಿಕೆ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಪ್ರೇಮಾ ಹೂಗಾರ ನಿಧನಕ್ಕೆ ಹೂಗಾರ ವಿವಿಧೊದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಹಾಗೂ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ. ಹಾಗೂ ಸಂಘದ ಎಲ್ಲಾ ಸದಸ್ಯರು ಕೂಡಾ ಸಂತಾಪ ಸೂಚಿಸಿದ್ದಾರೆ