ಅಯ್ಯಪ್ಪ ಮಾಲಾಧಾರಿಗೆ ಗುರುಸ್ವಾಮಿಯಿಂದ ಕಪಾಳಮೋಕ್ಷ.

ಪಾನಮತ್ತ ಅಯ್ಯಪ್ಪ ಸ್ವಾಮಿ ಸನ್ನಿದಾನಕ್ಕೆ ಆಗಮಿಸಿ ಅಯ್ಯಪ್ಪ ಮಾಲಾಧಾರಿಯೊಬ್ಬನಿಗೆ ಗುರುಸ್ವಾಮೀ ಕಪಾಳಮೋಕ್ಷ ಮಾಡಿದ ಘಟನೆ ಗೋಕುಲ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಡೆದಿದೆ.
ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ ವ್ಯಕ್ತಿಯೊಬ್ಬ ಕಠಿಣ ವೃತ ಪಾಲಿಸದೆ ಕುಡಿದು ಸ್ವಾಮಿ ಸನ್ನಿದಾನಕ್ಕೆ ಆಗಮಿಸಿದ್ದ. ಆತನ ಬಾಯಿಂದ ಬರುತ್ತಿದ್ದ ಮದ್ಯದ ವಾಸನೆ ಬರುತ್ತಿದಂತೆ ಮೋಹನ ಗುರುಸ್ವಾಮೀ ಅವರು ವ್ಯಕ್ತಿಯನ್ನು ತರಾಟೆಗೆ ತಗೆದುಕೊಂಡು ಕಪಾಳ ಮೋಕ್ಷ ಮಾಡಿ, ಸ್ಥಳದಲ್ಲೇ ಅಯ್ಯಪ್ಪ ಮಾಲೆ, ಕಪ್ಪುಬಟ್ಟೆಯನ್ನೂ ತೆಗೆದು ಕಟ್ಟಿಹಾಕುವಂತೆ ಸೂಚಿಸಿದರು. ಗುರುಸ್ವಾಮೀಯವರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಇತರರಿಗೂ ಮಾದರಿಯಾಗಿದೆ.