Uncategorized

ಸಿ.ಐ.ಡಿ ಪೊಲೀಸರ ಭರ್ಜರಿ ಬೇಟೆ ಲಕ್ಷಾಂತರ ಮೌಲ್ಯದ ಆನೆ ದಂತದ ಕೈ ಖಡಗ ಹಾಗು ಅಲಂಕಾರಿಕ ವಸ್ತುಗಳು ವಶ

ಹುಬ್ಬಳ್ಳಿ: ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಸಿ.ಐ.ಡಿ ಪೊಲೀಸ್‌ ಹಾಗೂ ವಿಶೇಷ ಅರಣ್ಯ ಸಂಚಾರಿ ದಳ ಭರ್ಜರಿ ಭೇಟೆಯಾಡುವ ಮೂಲಕ ಆನೆ ದಂತದಿಂದ ತಯಾರಿಸಿದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.


ಹುಬ್ಬಳ್ಳಿ ಹೊಸ ಬಸ್ ಸ್ಟ್ಯಾಂಡ್ ಹತ್ತಿರ ಪೊಲೀಸ್‌ ಅರಣ್ಯ ಸಂಚಾರಿ ದಳ ಹುಬ್ಬಳ್ಳಿರವರು ಕಾರ್ಯಚರಣೆ ನಡೆಸಿ ಆರೋಪಿತರಾದ ವಿಜಯ್‌ ತಂದೆ ಕೊಲ್ಲಾಪೂರ , ಸಾಗರ ಪರಾಣಿಕ, ವಿನಾಯಕ ಕಾಂಬ್ಳೆ, ದಾನಜೀ ಪಾಟೀಲ್ ಎಂಬುವವರನ್ನು ಬಂದಿಸಿದ್ದಾರೆ. ಅಕ್ರಮವಾಗಿ ಆನೆ ದಂತದಿಂದ ಮಾಡಿರುವ ಕಲಾಕೃತಿಗಳನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆರೋಪಿತರನ್ನು ಬಂಧಿಸಿ ಅವರ ವಶದಲ್ಲಿದ್ದ 1) 384 ಗ್ರಾಂ ತೂಕದ ಆನೆಯ ದಂತದಿಂದ ತಯಾರಿಸಿದ ಅಲಂಕಾರಿಕ ಪಟ್ಟಿಗೆ , 2) 112 ಗ್ರಾಂ ತೂಕದ ಆನೆಯ ದಂತದಿಂದ ತಯಾರಿಸಿದ ಕೆಂಪು ಹರಳು ಇರುವ ಒಂದು ಖಡ್ಗ, 3) 350 ಗ್ರಾಂ ತೂಕದ ಆನೆಯ ದಂತದಿಂದ ಮಾಡಿದ ಒಂದು ಆಯತಾಕಾರದ ಪೆಟ್ಟಿಗೆ ,4) 279 ಗ್ರಾಂ ತೂಕದ ಆನೆಯ ದಂತದಿಂದ ಮಾಡಿದ ಒಂದು ಮೊಟ್ಟೆಯಾಕಾರದ ಪೆಟ್ಟಿಗೆಯನ್ನು ಮಾರಾಟ ಮಾಡಲು ಮುಂದಾಗಿದ್ದರು.


ಆರೋಪಿತ ಸಾತ್ ತಂದೆ ಶಹಜಾನ ಜಮಾದಾರ ಇತನಿಗೆ ವಿಚಾರಿಸಲು ಇವುಗಳನ್ನು ತನ್ನ ತಂದೆಯವರಾದ ಶಹಜಾನ ಜಮಾದಾರ ರಾಜಸ್ಥಾನದಲ್ಲಿ ನಡೆಯುವ ಜಾತ್ರೆಗಳು ಸಂತೆಗಳು ಸಾಧುಸಂತರ ಬಳಿಯಿಂದ ಅನೇಕ ವರ್ಷಗಳ ಹಿಂದೆ ಸಂಗ್ರಹಿಸಿ ಮನೆಯಲ್ಲಿಟ್ಟಿದ್ದರು. ಅವುಗಳನ್ನು ಮಾರಾಟ ಮಾರಿದರೆ ಸಾಕಷ್ಟು ದುಡ್ಡು ಬರಬಹುದು ತಿಳಿದು ನಾವು ಇಲ್ಲಿಗೆ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿರುತ್ತಾರೆ.


ಈ ಯಶಸ್ವಿ ಕಾರ್ಯಾ ಚರಣೆಯನ್ನು ಶ್ರೀ ಕೆ ವಿ ತರತಚಂದ್ರ ಐ.ಪಿ.ಎಸ್ ಎಡಿಜಿಪಿ ಸಿ.ಐ.ಡಿ ಬೆಂಗಳೂರು ಮತ್ತು ಪ್ರಭಾರ ಡಿ.ಐ.ಜಿ.ಪಿ ಸಿಐಡಿ ಅರಣ್ಯ ಘಟಕ ಬೆಂಗಳೂರುರವರು ಹಾಗೂ ಪೊಲೀಸ್‌ ಉಪಾಧೀಕ್ಷಕರು, ಸಿಐಡಿ ಅರಣ್ಯ ಘಟಕ ಹುಬ್ಬಳ್ಳಿ ವಿಭಾಗರವರ ಮಾರ್ಗದರ್ಶನದಲ್ಲಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ ಆದ ಪ್ರಸಾದ ಪಣೇಕ‌ ಹಾಗೂ ಸಿಬ್ಬಂದಿ ಜನರಾದ ಎಲ್.ಎ ಪಾಠಕ, ಅಶೋಕ ನಾಗರಹಳ್ಳಿ ರವೀಂದ್ರ ಗೋಣೆನವರ, ಎಸ.ಎಚ್‌.ಹುಲಗೇರ ಹಾಗೂ ದಿವ್ಯ ಎಸ್ ನಾಯ್ಕ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!