ಇಬ್ಬರು ಖತರ್ನಾಕ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ವಿದ್ಯಾನಗರ ಠಾಣೆಯ ಪೊಲೀಸರು

ವಿದ್ಯಾನಗರ ಶಿರೂರ್ ಪಾರ್ಕ್ ನ ಗ್ರೀನ್ ಹಬ್ ಓಕ್ ಟ್ರಿ ಅಪಾರ್ಟ್‌ಮೆಂಟ್ ನಲ್ಲಿ ಕಳೆದ ಕೇಲವು ತಿಂಗಳ ಹಿಂದೆ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋದ ಸಂದರ್ಭದಲ್ಲಿ ಕಳ್ಳರು ಬಾಗಿಲ ಬೀಗವನ್ನು ಮುರಿದು ಮನೆಯಲ್ಲಿದ್ದ ಚಿನ್ನಾಭರಣ, ಎರಡು ಮೊಬೈಲ್ ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ಕಳ್ಳತನವಾದ ಮನೆಯ ಯಜಮಾನಿ ಪ್ರಿಯಾಂಕಾ ಕಬಾಡೆ ಎಂಬುವವರು ಕಳ್ಳತನಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇನ್ನು ಕಳ್ಳರ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಹುಬ್ಬಳ್ಳಿ ಶೆಟ್ಟರ್ ಲೇಔಟ್ ಬ್ರಿಡ್ಜ್ ಹತ್ತಿರ ಇಬ್ಬರು ಆರೋಪಿತರನ್ನು ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ನಂತರ ಪೊಲೀಸರು ಠಾಣೆಗೆ ಕರೆದ್ಯೋದು ತೀವ್ರ ವಿಚಾರಣೆ ನಡೆಸಿದ ಹಿನ್ನಲೆಯಲ್ಲಿ ಕಳೆದ ೪ ತಿಂಗಳ ಹಿಂದೆ ಶಿರೂರ್ ಪಾರ್ಕ ನಲ್ಲಿ ಅಪಾರ್ಟ್‌ಮೆಂಟ್ ನಲ್ಲಿ ಕಳ್ಳತನ ಮಾಡಿರುವುದಾಗಿ ಕಳ್ಳರು ತಪ್ಪು ಒಪ್ಪಿಕೊಂಡಿದ್ದಾರೆ.
ಇನ್ನೂ ಇವರಿಂದ ೧೬೦ ಗ್ರಾ. ಬಂಗಾರದ ಆಭರಣ ೧೫೦ ಗ್ರಾ. ತೂಕದ ಬೆಳ್ಳಿ ಆಭರಣ ಹಾಗೂ ಎರಡು ಮೊಬೈಲ್ ಫೋನ್ ಗಳು, ಒಂದು ಬೈಕ್ ಸೇರಿದಂತೆ ೮.೩೨ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.ಪ್ರೇಮ ಬದ್ದಿ ಹಾಗೂ ಗಣೇಶ ಬಂಧಿತ ಆರೋಪಿಗಳಾಗಿದ್ದು, ಪ್ರೇಮ ಬದ್ದಿ ಮೇಲೆ ಕಸಬಾಪೇಟ್ ಹಾಗೂ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿಯೂ ಕೂಡಾ ಪ್ರಕರಣ ದಾಖಲಾಗಿವೆ.

ಇನ್ನೂ ಈ ಪ್ರಕರಣವನ್ನು ಹು-ಧಾ ಪೊಲೀಸ್ ಆಯುಕ್ತರಾದ ರಮಣ ಗುಪ್ತಾ, ಡಿಸಿಪಿ ಸಾಹೀಲ್ ಬಾಗ್ಲಾ, ಹುಬ್ಬಳ್ಳಿ ಉತ್ತರ ವಿಭಾಗದ ಎಸಿಪಿ ಬಿ.ನಂದಗಾವಿ ಇವರುಗಳ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ ಪವಾರ ಇವರ ನೇತೃತ್ವದಲ್ಲಿ ವಿದ್ಯಾನಗರ ಠಾಣೆಯ ಪಿಎಸ್ಐ ಶ್ರೀಮಂತ ಹುಣಿಸಿಕಟ್ಟಿ, ಸಿಬ್ಬಂದಿಗಳಾದ ಶಿವಾನಂದ ತಿರಕಣ್ಣವರ, ಸಯ್ಯದ ಅಲಿ ತಹಶಿಲ್ದಾರ, ಸುನಿಲ್ ಲಮಾಣಿ, ರಮೇಶ ಹಲ್ಲೆ, ವಾಯ್.ಎಮ್.ಶೇಂಡ್ಗೆ, ಎಸ್.ಬಿ.ಯಳವತ್ತಿ, ಎನ್.ಬಿ.ನಾಯಕವಾಡಿ, ಮಂಜುನಾಥ ಏಣಗಿ, ಶರಣಗೌಡಾ ಮೂಲಿಮನಿ, ನೆಹರೂ ಲಮಾಣಿ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಚಿಕ್ಕಮಠ, ರವಿ ಗೋಮಪ್ಪನವರ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಬೇಧಿಸಿದದವರಿಗೆ ಪೊಲೀಸ್ ಆಯುಕ್ತರು ಶ್ಲಾಘಸಿ, ಬಹುಮಾನ ಘೋಷಣೆ ಮಾಡಿದ್ದಾರೆ.