ನಾನು ಯಾವುದೇ ತಪ್ಪು ಮಾಡಿಲ್ಲಾ : ರಾಹುಲ್ ಪ್ರಭುವಿನ ಸ್ಪೋಟಕ ವಿಡಿಯೋ ವೈರಲ್

ನಾನು ಯಾವುದೇ ತಪ್ಪು ಮಾಡಿಲ್ಲ, ಸುಖಾಸುಮ್ಮನೆ ನನ್ನ ಗುರಿಯಾಗಿಸಿಕೊಂಡು ಗಡಿಪಾರು ಮಾಡಿದ್ದಾರೆ. ನನ್ನ ಹಿಂದೆ ಕಾಣದ ಕೈಗಳ ಕೈವಾಡವಿದೆ. ಇದೇ ರೀತಿಯಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದರೇ (ಹಿಂದೆ) ಮುಂದಿನ ದಿನಗಳಲ್ಲಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದು ಖಚಿತ. ಇದು ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಗಡಿಪಾರು ಮಾಡಿರುವ ರಾಹುಲ್ ಪ್ರಭುವಿನ ಮಾತುಗಳು.
ಬುಧವಾರ ಕಮಿಷನರ್ ಎನ್.ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಏರ್ಪಡಿಸಿ ಬರೋಬರಿ 45 ರೌಢಿಶೀಟರ್ ಗಳನ್ನು ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಇದರಲ್ಲಿ ವಿದ್ಯಾನಗರದ ನಿವಾಸಿ ರಾಹುಲ್ ಪ್ರಭು (35) 2024ರ ವೇಳೆಯಲ್ಲಿ ಗಾಂಜಾ ಪ್ರಕರಣ ದಾಖಲಾಗಿತ್ತು. ಇದರಲ್ಲಿ A2 ಆರೋಪಿಯಾಗಿದ್ದು, ಈ ಹಿಂದೆ ಚುನಾವಣೆ ಸಮಯದಲ್ಲಿ ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡಲಾಗಿತ್ತು.
ಇದೀಗ ಗಡಿಪಾರು ಮಾಡಿರುವ ಕುರಿತು ಸ್ವತಃ ರಾಹುಲ್ ಪ್ರಭು ವಿಡಿಯೋ ಮಾಡಿ ಹರಿಬಿಟ್ಟಿದ್ದು, ಅದರಲ್ಲಿ ಪೊಲೀಸರಿಂದ ತನಗೆ ಅನ್ಯಾಯವಾಗಿದೆ. ನನಗೆ ನ್ಯಾಯ ಕೊಡಿಸಬೇಕು. ನಾನು ಆರ್ಥಿಕವಾಗಿ ಸ್ಥಿತಿವಂತನಲ್ಲ. ರಾತ್ರೋರಾತ್ರಿ ಯಾವುದೇ ಕಾರಣ ನೀಡದೇ ಬಿಳಿ ಪೇಪರ್ ಅಲ್ಲಿ ಸಹಿ ಮಾಡಿಸಿಕೊಂಡು ಗಡಿಪಾರು ಮಾಡಿದ್ದಾರೆ. ನನಗೆ ನ್ಯಾಯ ಬೇಕು. ಇಲ್ಲವಾದಲ್ಲಿ ನನಗೆ ಚಿತ್ರಹಿಂಸೆ ನೀಡುತ್ತಿರುವವರ ಹೆಸರು ಬರೆದಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ.
ಸದ್ಯ ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರಕ್ಷಣೆ ಕೊಡಬೇಕಾದ ಪೊಲೀಸರೇ ಈ ರೀತಿಯಾಗಿ ಮಾಡಿದ್ರೆ ಹೇಗೆ? ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಎದೇನೇ ಇರಲಿ ದಕ್ಷ ಅಧಿಕಾರಿ ಎನಸಿಕೊಂಡಿರುವ ಎನ್.ಶಶಿಕುಮಾರ್ ಅವರ ಕಣ್ಣ ತಪ್ಪಿಸಿ ಈ ರೀತಿಯ ಕಾರ್ಯ ಆಗಿದೀಯಾ? ಹಾಗಿದ್ರೆ ಯಾವ ರೀತಿಯ ಕ್ರಮ ಕೈಗೊಳ್ಳತ್ತಾರೆ ಕಾದು ನೋಡಬೇಕಿದೆ.
ಅದೇ ರೀತಿಯಲ್ಲಿ ಎಜಿಡಿಪಿ, ಡಿಜಿಪಿ ಈ ಸುದ್ದಿಯನ್ನು ಗಮನಿಸಿ ತಮ್ಮ ಅಧೀನ ಅಧಿಕಾರಿಗಳಿಗೆ ಯಾವ ರೀತಿಯ ಸೂಚನೆ ಕೊಡತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.