ಶಹರ ಪೊಲೀಸರ ಭರ್ಜರಿ ಬೇಟೆ ಅಂತರ ಜಿಲ್ಲಾ ಕಳ್ಳನ ಬಂಧನ ಲಕ್ಷಾಂತರ ಹಣ ವಶ

ಹುಬ್ಬಳ್ಳಿಯ ಕೊ ಆಫರೇಟಿವ್ ಸೊಸೈಟಿಯಲ್ಲಿ ಕಳ್ಳತನ ಮಾಡಿದ ಚಾಲಾಕಿ ಕಳ್ಳನನ್ನು ಕಳ್ಳತನ ಮಾಡಿದ ಕೆಲವೆ ದಿನಗಗಳಲ್ಲಿ ಶಹರ ಪೊಲೀಸರು ಬಂದಿಸಿದ್ದಾರೆ

ದಿನಾಂಕ: 11/03/2023 ರಂದು ರಾತ್ರಿ ವೇಳೆಯಲ್ಲಿ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೊಯಿನ್ ರಸ್ತೆ ಉಮಚಗಿ ಕಾಂಪ್ಲೇಕ್ಸನ 2 ನೇ ಮಹಡಿಯಲ್ಲಿ ಇರುವ ಶ್ರೀ ಪೂಜ್ಯ ಮಹಾಂತಪ್ಪ. ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಶಟರ್ಸ್ ಬೀಗಗಳನ್ನು ಮುರಿದು ಸೊಸೈಟಿಯ ಲಾಕರದಲ್ಲಿ ಇದ್ದ 2,31,370/- ರೂ ನಗದು ಹಣ ಮತ್ತು ಸೊಸೈಟಿಯಲ್ಲಿ ಇದ್ದ ಸಿಸಿ ಕ್ಯಾಮೆರಾದ ಡಿವಿಆರ್‌ನ್ನು ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದರು.
ಇನ್ನು ಇ ಕುರಿತು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಾರಂಭಿಸಿದ ಪೊಲೀಸರು ಕಳ್ಳತನ ಮಾಡಿದ್ದ ಆರೋಪಿಯನ್ನು ಕೆಲವೇ ದಿನಗಳಲ್ಲಿ ಬಂದಿಸಿದ್ದಾರೆ .
ಇನ್ನು ಮುಜಾಪರ ಶೇಖ ದಾಂಡೇಲಿ ಇತನು ಅಂತರ ಜಿಲ್ಲಾ ಕಳ್ಳನಾಗಿದ್ದು ಇತನನ್ನು ಬಂದಿಸಿ ಆತನಿಂದ ಸೊಸೈಟಿಯಲ್ಲಿ ಕಳ್ಳತನವಾದ 1,35,000/- ರೂ `ನಗದು ಹಣವನ್ನು ಜಪ್ತು ಮಾಡಿದ್ದು, ಸದರಿ ಕಳ್ಳನು ದಾಂಡೇಲ ಶಹರ ಪೊಲೀಸ್ , ಹಳ್ಯಾಳ ಪೊಲೀಸ್ ಠಾಣೆ, ಕುಮುಟಾ ಪೊಲೀಸ್ ಠಾಣೆ, ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು.

ಆರೋಪಿಗೆ ಸದ್ಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು
ಇನ್ನು ಈ ಪ್ರಕರಣದಲ್ಲಿ ಪೊಲೀಸ ಆಯುಕ್ತರು ಹಾಗು ಡಿಸಿಪಿ ಮತ್ತು ಎ ಸಿ ಪಿ ಆರ್ ಕೆ ಪಾಟೀಲ ಇವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಶಹರ ಪೊಲೀಸ ಠಾಣೆಯ ಇನ್ಸಪೆಕ್ಟರ್ ಆದ ವಿಶ್ವನಾಥ ಚೌಗುಲೆ ಇವರ ನೇತೃತ್ವದಲ್ಲಿ ಠಾಣೆಯ ಪಿಎಸ್‌ಐ ವಿನೋದ ಹಾಗೂ ಸಿಬ್ಬಂದಿಯಾದ ಸಂಗಪ್ಪ ಕಟ್ಟಮನಿ, ರವಿರಾಜ ಕೆಂದೂರ, ಕಲ್ಲನಗೌಡ ಗುರನಗೌಡ್ರ, ರುದ್ರಪ್ಪ ಹೊರಟ್ಟಿ, ರಾಮರಾವ್, ರಾಠೋಡ ಇವರ ಜೊತೆಯಲ್ಲಿ ಆರೋಪಿಯನ್ನು ಬಂದಿಸಿದ್ದು,ಇವರ ಕಾರ್ಯಾಚರಣೆಗೆ ಪೊಲೀಸ ಆಯುಕ್ತರು ಮೆಚ್ಚುಗೆ ವ್ಯೆಕ್ತಪಡಿಸಿದ್ದಾರೆ