ಅಯ್ಯೋ ಮಾನವೀಯತೆ ಮರೆಯಾಯಿತಾ’? ಹುಬ್ಬಳ್ಳಿಯಲ್ಲಿ ನಡೆದ ಘಟನೆ ನೀವು ಒಮ್ಮೆ ನೋಡಿ

ಹುಬ್ಬಳ್ಳಿ : ಪುಟ್ ಪಾತ್ ಮೇಲೆ ಕುಡಿದ ಮತ್ತಿನಲ್ಲಿ ಮಲಗಿದ್ದ ವ್ಯಕ್ತಿಯೋರ್ವನನ್ನು ಸೆಕ್ಯುರಿಟಿ ಗಾರ್ಡ್ ಅಂಗಡಿಯ ಶೆಟ್ಟರ್ ಮುಚ್ಚುವ ಕಬ್ಬಿಣದ ರಾಡ್ ನಿಂದ ಎಳೆದು ಬೇರೆಡೆ ಸಾಗಿಸಿದ ಅಮಾನವೀಯ ಘಟನೆ ನಗರದ ರೈಲ್ವೆ ಸ್ಟೇಷನ್ ಬಳಿ ನಡೆದಿದ್ದು, ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಸುಮಾರು ೪೫ ವರ್ಷದ ವ್ಯಕ್ತಿಯಾಗಿದ್ದು, ಆತನ ಹೆಸರು ತಿಳಿದು ಬಂದಿಲ್ಲ.
ಆದರೇ ಪುಟ್ ಪುತ್ ಮೇಲೆ ಮಲಗಿದ್ದ ಕುಡಕನ ಕಾಲಿಗೆ ಕಬ್ಬಿಣದ ರಾಡ್ ಹಾಕಿ ಎಳೆದುಕೊಂಡು ಹೋಗುತ್ತಿದ್ದರೂ ಕೂಡಾ ಅಲ್ಲಿದ್ದ ಜನರು ಮೂಖವಿಸ್ಮತರಾಗಿ ನೋಡುತ್ತಿದ್ದ ದೃಶ್ಯ ಕಂಡು ಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ‘ಅಯ್ಯೋ ಮಾನವೀಯತೆ ಮರೆಯಾಯಿತಾ’? ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.