ಸಿಸಿಬಿ ಪೊಲೀಸರ ಭರ್ಜರಿ ಭೇಟೆ ಲಕ್ಷಾಂತರ ಮೌಲ್ಯದ ಅಫೀಮು ಹಾಗು ಸ್ಪಿರಿಟ್ ಸಹಿತ ಇಬ್ಬರ ಬಂಧನ

ಚುನಾವಣೆ ಘೋಷಣೆ ಆಗುತ್ತಿದ್ದಂತೆ ಇತ್ತ ಹುಬ್ಬಳ್ಳಿಯಲ್ಲಿ ಸಿಸಿಬಿ ಪೊಲೀಸರು ಒಂದೇ ದಿನ ಎರಡು ಕಡೆ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಸ್ಪಿರಿಟ್ ಹಾಗೂ ಅಫಿಮನ್ನು ವಶಪಡಿಸಿಕೊಂಡಿದ್ದಾರೆ

ಸಿಸಿಬಿಯ ಎಸಿಪಿ ಆದಂತ ನಾರಾಯಣ ವಿ ಬರಮನಿ ಇವರ ನೇತೃತ್ವದಲ್ಲಿ ಘಂಟಿಕೇರಿ ಪೊಲೀಸ ಠಾಣಾ ವ್ಯಾಪ್ತಿಯ ವಸಂತ ಕೆಪೆಯ ಹತ್ತಿರ ನೀಷೇಧಿತ 253 ಗ್ರಾಂ ತೂಕದ ಅಫೀಮು ಹಾಗು ವಾಹನ ಮತ್ತು ಮೊಬೈಲ್ ನಗದು ಸೇರಿದಂತೆ 3.20.020ರೂಪಾಯಿಗಳ ಸಮೇತವಾಗಿ ಅಫೀಮು ಮಾರಿತ್ತಿದ್ದ ಅರ್ಜುನರಾಮ ರಾರಾಮು ಪಟೇಲ್ ಬಂದಿಸಿದ್ದು ಇನ್ನು ಈ ಕುರಿತು ಸಿ ಇ ಎನ್ ಕ್ರೈಂ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಇನ್ನು ನಗರದ ಬೆಂಡಿಗೇರಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಕೆ ಬಿ ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಸ್ಪಿರಿಟನ್ನು ಆರೋಪಿ ಮಂಜುನಾಥ ಯರಕಲ ನನ್ನು ಬಂಧಿಸಿ ಆತನಿಂದ 10 ಪ್ಲಾಸ್ಟಿಕ್ ಕ್ಯಾನುಗಳಲ್ಲಿ ಇದ್ದ 320 ಲೀಟರ್ ಸುಮಾರು 1.28.000 ಸಾವಿರ ಮೌಲ್ಯದ. ಸ್ಪಿರಿಟ್ ವಶಪಡಿಸಿಕೊಂಡು ಈ ಕುರಿತು ಬೆಂಡಿಗೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು .

ಇನ್ನು ಈ ಒಂದು ಕಾರ್ಯಾಚರಣೆಯನ್ನು
ರಮಣಗುಪ್ತ ಐಪಿಎಸ್ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡರವರು ಹಾಗೂ ಶ್ರೀ ರಾಜೀವ ಎಂ. ಐಪಿಎಸ್ ಉಪ ಪೊಲೀಸ್ ಆಯುಕ್ತರು (ಕಾ& ಸು), ಶ್ರೀ: ಗೋಪಾಲ ಬ್ಯಾಕೋಡ ಐಪಿಎಸ್ ಉಪ ಪೊಲೀಸ್ ಆಯುಕ್ತರು (ಆ & ಸಂ) ರವರ ಮಾರ್ಗದರ್ಶನದಲ್ಲಿ ಸದರಿ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ ಸಿಸಿಬಿಯ ಅಧಿಕಾರಿ ಹಾಗೂ ಸಿಬ್ಬಂದಿಗಳಾದ ಎಸಿಪಿ ನಾರಾಯಣ ಎ. ಬರಮನಿ, ಇವರ ನೇತೃತ್ವದಲ್ಲಿ ಪೊಲೀಸ್ ಇನ್ಸಪೆಕ್ಟರ್‌ಗಳಾದ ಎಸ್.ಎಂ.ನ್ಯಾಮಣ್ಣವರ, ಗೋಪಾಲ ರಾಠೋಡ, ರಮೇಶ, ಕಾಂಬಳೆ, ಎಚ್.ಎಂ.ಪಾಟೀಲ್ ಹಾಗೂ ಸಿಬ್ಬಂದಿಗಳಾದ ಬಿ.ಎನ್.ಲಂಗೋಟಿ, ಎಸ್.ಎಚ್.ಸಾಳುಂಕೆ, ಬಿ.ಎಫ್.ಬೆಳಗಾವಿ, ರಾಜೀವ ಬಿಷ್ಪಂಡೇರ, ಎಫ್.ಬಿ.ಕುರಿ, ಉಮೇಶ ದೊಡ್ಡಮನಿ, ಮಾರುತಿ ಭಜಂತ್ರಿ, ಅನಿಲ, ಹುಗ್ಗಿ, ಎಸ್.ಜಾಲವಾಡಗಿ, ಎನ್.ಓ.ಜಾಧವ, ಎಸ್.ಎಚ್.ಕೆಂಜೋಡಿ, ಆರ್.ಎಸ್.ಗುಂಜಳ, ಡಿ.ಎಸ್ ಗುಂಡಗೈ, ಎಸ್.ಆರ್.ಇಚ್ಚಂಗಿರವರ ಕರ್ತವ್ಯವನ್ನು ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯೆಕ್ತಪಡಿಸಿರುತ್ತಾರೆ
