ಪ್ರೀತಿ ಮಾಡಿದಕ್ಕೆ ರೊಚ್ಚಿಗೆದ್ದು ರಸ್ತೆಯಲ್ಲಿ ಕಲ್ಲಿನಿಂದ ಜೋಡಿಗೆ ಥಳಿಸಿದ ಪೋಷಕರು.

ಹುಬ್ಬಳ್ಳಿ: ಮನೆಯ ವಿರೋಧದ ನಡುವೆ ಇಂಟರ್ ಕಾಸ್ಟ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ ಪ್ರೇಮಿಗಳಿಗೆ ಯುವತಿಯ ಪೋಷಕರು ಪ್ರೇಮಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಗೋಪನಕೊಪ್ಪ ನಿವಾಸಿಗಳಾದ ಯುವ ಪ್ರೇಮಿಗಳು ಇಲ್ಲಿನ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಮನೆ ಬಿಟ್ಟು ಪ್ರೀಯಕರನೊಂದಿಗೆ ಬಂದಿದ್ದ ಪ್ರೇಮಿಗಳನ್ನು ಯುವತಿಯ ತಾಯಿ, ಹಾಗೂ ಮಾವ ಅಡ್ಡಗಟ್ಟಿ ಯುವತಿಯ ಪ್ರೇಮಿಗೆ ಅವಾಚ್ಯವಾಗಿ ನಿಂದಿಸಿ, ಮಾತಿಗೆ ಮಾತು ಬೆಳೆದು ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ.

ಇನ್ನು ಸ್ಥಳೀಯರು ಜಗಳವನ್ನು ಬಿಡಿಸಿ, ಉಪನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಉಪನಗರ ಠಾಣೆಯ ಪೊಲೀಸರು ಹಲ್ಲೆ ಮಾಡಿರುವ ತಾಯಿ ಹಾಗೂ ಮಾವನನ್ನು ಹಾಗೂ ಪ್ರೇಮಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.