ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಗೆ ಬಿಜೆಪಿಯ ಟಿಕೆಟ್ ಮಿಸ್.ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ: ಮಾಜಿ ಸಿಎಂ ಶೆಟ್ಟರ್

ಹುಬ್ಬಳ್ಳಿ: ನಿರಂತರವಾಗಿ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಂಸದರು ನನ್ನ ಜೊತೆ ನಮ್ಮ ಸಂಪರ್ಕದಲ್ಲಿದಾರೆ. ಆದರೆ ಬೇರೆ ಪಕ್ಷದವರೂ ಯಾರೂ ನನ್ನ ಜೊತೆ ಮಾತಾಡಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ತಮ್ಮ ನಿವಾಸದಲ್ಲಿಯೇ ಮತ್ತೊಮ್ಮೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಡಿ.ಕೆ.ಶಿವಕುಮಾರ್ ಆಗಲಿ ಯಾರೂ ಕೂಡಾ ನನ್ನ ಸಂಪರ್ಕ ಮಾಡಿಲ್ಲ. ನಾನು ಜನಾರ್ದನ ರೆಡ್ಡಿ ಪಕ್ಷಕ್ಕೆ ಹೋಗಲ್ಲ. ನಾನು ಕ್ಲೀಯರ್ ಇದ್ದೇನೆ. ಬೇರೆಯವರ ಹೆಸರು ಹೇಳೋದಿಲ್ಲ ಎಂದರು.
ನಾನೇ ಸ್ಪರ್ಧೆ ಮಾಡ್ತೀನಿ ಎಂದ ಅವರು, ಯಾವುದೇ ಆಗಲಿ ಏನೇ ಆಗಲಿ ನಾನೇ ಸ್ಪರ್ಧೆ ಮಾಡ್ತೀನಿ. ಸ್ಪರ್ಧೆಯನ್ನು ಬಿಟ್ಟು ಕೊಡಲ್ಲ ಎಂದು ಅವರು ಹೇಳಿದರು.