Uncategorized

ಉಪನಗರ ಪೊಲೀಸರ ಭರ್ಜರಿ ಭೇಟೆ ಗ್ರಾಹಕರ ಸೋಗಿನಲ್ಲಿ ಬಂಗಾರದ ಅಂಗಡಿಗಳನ್ನು ದೋಚುತಿದ್ದ ಅಂತರಾಜ್ಯ ಕಳ್ಳರ ಬಂಧನ

ಹುಬ್ಬಳ್ಳಿಯಲ್ಲಿ ಹಗಲು ಹೊತ್ತಿನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಬಂಗಾರ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ ಇಬ್ಬರು
ಆರೋಪಿಗಳನ್ನು ಹೆಡೆ ಮುರಿ ಕಟ್ಟುವಲ್ಲಿ ಹುಬ್ಬಳ್ಳಿಯ ಉಪನಗರ ಪೊಲೀಸರು ಯಶಸ್ವಿಯಾಗಿದ್ದಾರೆ.


ಕಳೆದ ಕೆಲವು ತಿಂಗಳ ಹಿಂದೆ ಕೊಪ್ಪಿಕರ ರಸ್ತೆಯಲ್ಲಿ ಇರುವ ಮನೋಜ್ ಜ್ಯುವೇಲರ್ಸ ಬಂಗಾರದ ಅಂಗಡಿಯಲ್ಲಿ ಸಾಯಂಕಾಲ ಪೂನಾ ಮೂಲದ ನವಜೀವನ ಎಂಬ ಹೆಸರಿನ ಯುವಕ ಹಾಗು ಜೋಶ್ನಾ ಎಂಬ ಯುವತಿ ಇಬ್ಬರು ಬಂಗಾರ ಖರೀದಿ ಮಾಡುವ ನೆಪದಲ್ಲಿ ಅಂಗಡಿಯಲ್ಲಿ ಕೆಲಸ ಮಾಡುವ ನೌಕರರು ಹಾಗೂ ಅಂಗಡಿಯ ಮಾಲೀಕರ ಗಮನ ಬೇರೆ ಕಡೆ ಸೆಳೆದು 2.63.800 ಮೌಲ್ಯದ 50.6 ಗ್ರಾಂ ತೂಕದ ಇಂಡೋ ಇಟ್ಯಾಲಿಯನ್‌ ಮಾಡೆಲ್‌ ದ ಬಂಗಾರದ ಚೈನನ್ನು ಕಳ್ಳತನ ಮಾಡಿಕೊಂಡು ಪರಾರಿ ಆಗಿರುತ್ತಾರೆ .

ಇನ್ನು ಅಂಗಡಿ ಮಾಲಿಕರ ಗಮನಕ್ಕೆ ಕಳ್ಳತನ ಬಗ್ಗೆ ಗೊತ್ತಾಗಿ ಮಾಲಿಕರು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದಾಗ ತನಿಖೆ ನಡೆಸಿದ ಪೊಲೀಸರು ಈ ಇಬ್ಬರನ್ನು ಕಳ್ಳರನ್ನು ಬಂದಿಸಿರುತ್ತಾರೆ.

ಇಬ್ಬರು ಕಳ್ಳರು ಈ ಮೊದಲು ಧಾರವಾಡ ಸೇರಿದಂತೆ ಇನ್ನು ಅನೇಕ ಜಿಲ್ಲೆಗಳಲ್ಲಿ ಇದೆ ರೀತಿಯಲ್ಲಿ ಕಳ್ಳತನ ಮಾಡಿರುವುದಾಗಿ ತನಿಖೆ ವೇಳೆ ಗೊತ್ತಾಗಿದ್ದು ಇನ್ನು ಆರೋಪಿಗಳಿಂದ ಸುಮಾರು 3.38.800 ಮೌಲ್ಯದ 66.6 ಗ್ರಾಂ ತೂಕದ ಬಂಗಾರದ ಚೈನುಗಳನ್ನು ವಶಪಡಿಸಿಕೊಂಡು ಇನ್ನು ತನಿಖೆಯನ್ನು ಮುಂದುವರೆಸಿರುತ್ತಾರೆ

ಇನ್ನು ಈ ಪ್ರಕರಣವನ್ನು ಪೊಲೀಸ್ ಆಯುಕ್ತರದ ಲಾಬೂರಾಮ್ ಇವರ ನೇತೃತ್ವದಲ್ಲಿ ಡಿಸಿಪಿಗಳಾದ ಸಾಹಿಲ ಬಾಗ್ಲಾ .ಗೋಪಾಲ ಎಮ್ ಬ್ಯಾಕೋಡ .ಎಸಿಪಿ ವಿನೋದ ಮುಕ್ತೆದಾರ ಮಾರ್ಗದರ್ಶನದಲ್ಲಿ ಉಪನಗರ ಠಾಣೆಯ ಇನ್ಸಪೆಕ್ಟರ ಆದ ರವಿಚಂದ್ರನ್ ಡಿ.ಬಿ ಇವರ ನೇತೃತ್ವದಲ್ಲಿ ಪಿಎಸಐ ಕವಿತಾ ಎಸ್ ಎಮ್.ಸ್ವಾತಿ ಮುರಾರಿ ಎ ಎಸ್ ಐ ಎಮ್ ಆರ್ ಮಲ್ಲಿಗವಾಡ ಜೊತೆಯಲ್ಲಿ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಧನಿಗೊಂಡ.ಮಂಜುನಾಥ ಯಕ್ಕಡಿ. ಶ್ರೀನಿವಾಸ್ ಯರಗುಪ್ಪಿ. ಕೃಷ್ಣಾ ಮೋಟೆಬೆನ್ನೂರ. ಮಂಜುನಾಥ ಹಾಲರವ. ರೇಣು ಸಿಕ್ಕಲಗೇರ. ಪ್ರಕಾಶ ಕಲಗುಡಿ.ಮಾಬುಸಾಬ ಮುಲ್ಲಾ.ಆರೂಢ ಕರೆಣ್ಣವರ ಡಿ ಎ ಮಾಂಗ . ಮ್ ಅಯ್ಯನಗೌಡರ. ಹಾಗು ತಾಂತ್ರಿಕ ವಿಭಾಗದ ವರಾದ್ ಆರ ಕೆ ಬಡಂಕರ. ಎಮ್ ಎಸ್ ಚಿಕ್ಕಮಠ.ರವಿ ಗೋಮಪ್ಪನವರ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದ ಎಲ್ಲಾ ಸಿಬ್ಬಂದಿಯ ಕಾರ್ಯವೈಖರಿಯನ್ನು ಮೆಚ್ಚಿ ಪೊಲೀಸ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!