ನಕಲಿ ಜಾತಿ ಪ್ರಮಾಣ ಪತ್ರ ಕೊಟ್ಟು ಬಿಜೆಪಿ ಟಿಕೆಟ್ ಪಡೆದ ಅಭ್ಯರ್ಥಿ ಪರಿಶಿಷ್ಟ ಜಾತಿ ಅಥವಾ ಒಕ್ಕಲಿಗರಾ ಎಂಬ ಗಂಭೀರ ಆರೋಪ ಡಾ. ಕ್ರಾಂತಿಕಿರಣ ಮೇಲೆ

ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕ್ರಾಂತಿ ಕಿರಣ್
ನಕಲಿ ದಾಖಲೆ ಸೃಷ್ಟಿ ಮಾಡಿ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಚುನಾವಣಾಗೆ ಸ್ಪರ್ಧೆ ಮಾಡುತ್ತಿದ್ದಾರಡ ಎಂಬ ಆರೋಪ ಕೇಳಿಬಂದಿದೆ.
ಚುನಾವಣಾ ಟಿಕೆಟ್ ಪಡೆಯಲು ಡಾ. ಕ್ರಾಂತಿಕಿರಣ ಫೇಕ್ ಸರ್ಟಿಫಿಕೇಟ್ ಸೃಷ್ಟಿಸಿದ್ದಾರೆ ಎಂದು ದಲಿತ ಸಂಘನೆ ಮುಖಂಡರು ಆರೋಪಿಸಿದ್ದಾರೆ. ಡಾ ಕ್ರಾಂತಿ ಕಿರಣ್ ಸರ್ಕಾರಿ ಸೇವೆಗೆ ಸಲ್ಲಿಸಿದ್ದ ದಾಖಲೆಯೇ ಬೇರೆಯಾಗಿದ್ದು,
ಪ್ರಸ್ತುತ ದಾಖಲೆಯೇ ಬೇರೆಯಾಗಿದೆ.
ಕಿಮ್ಸ್ ನಲ್ಲಿ ವೈದ್ಯಕಿಯ ವೃತ್ತಿ ಪಡೆಯಲು ಸರ್ಕಾರಿ ಸೇವೆ ದಾಖಲೆಯಲ್ಲಿ ಜಾತಿ ಕಾಲಂ ನಲ್ಲಿ ಹಿಂದೂ ಒಕ್ಕಲಿಗ ಎಂದು ನಮೂದು ಮಾಡಲಾಗಿದೆ.
ಇನ್ನೂ ಮೂಲ ವಿಳಾಸ ಬೆಂಗಳೂರಿನಲ್ಲಿದೆ. ಆದರೆ ಸದ್ಯದ ದಾಖಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಮೂಲ ವಿಳಾಸ ರಾಮನಗರದ ಚನ್ನಪಟ್ಟಣ ಅಂತ ಇದೆ.

ಹೀಗಾಗಿ ಕ್ರಾಂತಿಕಿರಣ್ ಪರಿಶಿಷ್ಟ ಜಾತಿ ಅಥವಾ ಒಕ್ಕಲಿಗರಾ ಎಂಬ ಅನುಮಾನ ಇದ್ದು, ಚುನಾವಣಾ ನಿಲ್ಲಲು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಹೀಗಾಗಿ ದಲಿತ ಸಂಘಟನೆ ಮುಖಂಡರು
ಡಾ. ಕ್ರಾಂತಿ ಕಿರಣ್ ಮೂಲ ದಾಖಲಾತಿಯನ್ನು ಮತ್ತೊಮ್ಮೆ ಮರುಪರಿಶೀಲಿಸಬೇಕು. ಒಂದು ವೇಳೆ ಅವರು ನಕಲಿ ದಾಖಲಾತಿ ನೀಡಿದ್ದರೆ ಕ್ರಮ ತಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.