ಧಾರವಾಡದ ಬಾಸೆಲ್ ಮಿಷನ್ ಆಂಗ್ಲ ಶಾಲೆಯಲ್ಲಿ ಶಿಕ್ಷಕರ ನೇಮಕಾತಿ ರದ್ದತಿಗೆ ಮೆಲ್ವಿನ ಗುಡಗುಂಟಿ ಆಗ್ರಹ

ಧಾರವಾಡದ ಬಾಸೆಲ್ ಮಿಷನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತೆರವಾಗಿದ್ದ ಸಹ ಶಿಕ್ಷಕರ ಹುದ್ದೆಗಳ ಭರ್ತಿ ಮಾಡಿಕೊಳ್ಳುವಂತೆ ನೀಡಲಾಗಿರುವ ಆದೇಶವನ್ನ ರದ್ಧು ಮಾಡಬೇಕು. ನೇಮಕಾತಿ ಆದೇಶವೂ ನಿಯಮಾನುಸಾರವಾಗಿರುವುದಿಲ್ಲ ಎಂದು ಮೆಲ್ವಿನ್ ಗುಡಗುಂಟಿ ಎಂಬುವವರು ಆರೋಪಿಸಿದ್ದಾರೆ.
ಹುಬ್ಬಳ್ಳಿಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಾಸೆಲ್ ಮಿಶನ್ ಉಚ್ಚ ಶಿಕ್ಷಣ ಸಂಸ್ಥೆಯ ಟ್ರಸ್ಟ್ ನ ಮೋಡ್ ಆಫ್ ಸಕ್ಸೇಶನ್ ಪ್ರಕಾರ ಏಳು ಜನ ಸದಸ್ಯರು ಇದ್ದು, ಇದರಲ್ಲಿ 5ನೇ ಕ್ರಮದಲ್ಲಿ ಸದಸ್ಯರೊಬ್ಬರು ನಿಧನಹೊಂದಿದ್ದಾರೆ. ಹೀಗಾಗಿ ಟ್ರಸ್ಟ್ ನ ಮೀಟಿಂಗ್ ಕೋರಂ 4 ಸದಸ್ಯರು ಇರಬೇಕಾಗಿದ್ದರೂ 3 ಸದಸ್ಯರು ಮೀಟಿಂಗ್ ಮಾಡಿ ಠರಾವ್ ಪಾಸ್ ಮಾಡಿ ಅದನ್ನ ಡಿಡಿಪಿಐ ಕಚೇರಿಗೆ ಸಲ್ಲಿಸಿ ಆದೇಶ ಪಡೆದಿದ್ದಾರೆ. ಸಂಸ್ಥೆಯ ಅಡಿಯಲ್ಲಿ ಬರುವ 4 ಶಾಲೆಗಳಲ್ಲಿ ಸುಮಾರು 12 ಸಹ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಆದೇಶ ಸಂಖ್ಯೆಯೊಂದಿಗೆ ಪತ್ರಿಕಾ ಪ್ರಕಟಣೆಯನ್ನ ನೀಡಿದ್ದರು. ಆದೇಶದ ಪ್ರಕಾರ, 2 ತಿಂಗಳ ವಳಗಾಗಿ ಎಲ್ಲ ಪ್ರಕ್ರಿಯೆಗಳು ಮುಗಿಸಬೇಕು ಇಲಾಖೆಯಿಂದ ಅನುಮೋದನೆಗೊಂಡ ನಂತರವೇ ನೇಮಕಾತಿ ಮಾಡಬೇಕು. ಆದರೆ ಇದ್ಯಾವೂದು ಆಗಿಲ್ಲ. ಇದರಲ್ಲಿ ಮಾರ್ಟಿನ್ ಚಾರ್ಲ್ಸ್ ಬೋರ್ಗಾಯಿ ಎಂಬುವವರ ಹೆಸರು ಪಿ.ಟಿಆರ್.ಶೀಟ್ ನಲ್ಲಿ ನಮೂದಾಗದಿದ್ದರೂ, ಹಾಗೂ ಟ್ರಸ್ಟ್ ನ ಯಾವೂದೇ ಸಭೆಯಲ್ಲಿ ಟ್ರಸ್ಟ್ ನ ಅಧ್ಯಕ್ಷರೆಂದು ನೇಮಕವಾಗಿಲ್ಲದಿದ್ದರೂ ನಕಲಿ ಧಾಖಲೆ ಸೃಷ್ಠಿ ಮಾಡಿ ಠರಾವು ಸಲ್ಲಿಸಿದ್ದಾರೆಂದು. ಜತೆಗೆ ಅಧಿಕಾರಿಗಳು ಕೂಡ ಮಾರ್ಟಿನ್ ಬೋರ್ಗಾಯಿ ಯವರೊಂದಿಗೆ ಶಾಮೀಲಾಗಿ ಸಹ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆದೇಶವನ್ನ ಎಲ್ಲ ನಿಯಮಾವಳಿಗಳನ್ನ ಗಾಳಿಗೆ ತೂರಿ ನೀಡಿದ್ದಾರೆ. ಮೇಲ್ನೋಟಕ್ಕೆ ಇಲ್ಲಿ ಅವ್ಯವಹಾರದ ಸಂದೇಶ ಮೂಡುತ್ತಿದೆ. ಹೀಗಾಗಿ ನಿಮಯಗಳಿಗೆ ಒಳಪಡದ ನೇಮಕಾತಿಯನ್ನ ರದ್ದು ಪಡಿಸಬೇಕು. ಹಾಗು ಈ ಅಕ್ರಮದಲ್ಲಿ ಶಮಿಲಾದ ಎಲ್ಲರನ್ನು ಸರಕಾರ ಬಂದಿಸಿ ಕಾನೂನು ಕ್ರಮ ಜರಿಗಿಸಲು ಪೊಲೀಸ ಇಲಾಖೆಗೆ ಆದೇಶಿಸಬೇಕು . ಇಲ್ಲವಾದಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಇನ್ನು ಸುದ್ದಿಗೋಷ್ಠಿಯಲ್ಲಿ ಡೇವಿಡ್ ಬಳ್ಳಾರಿ ಸೇರಿದಂತೆ ಇನ್ನಿತರರು ಉಪಸ್ತಿತರಿದ್ದರು.