ಹುಬ್ಬಳ್ಳಿಯಲ್ಲಿ ಅಕ್ರಮ ಮರಳು ದಂಧೆ ಬಗೆದಷ್ಟು ಆಳ………ಅಕ್ರಮ ಮರಳು ದಂಧೆ ಭಾಗ-2

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಕ್ರಮ ಮರಳು ಸಾಗಾಟ ದಂಧೆಯ ಕುರಿತು ನಿಮ್ಮ ” Etv24×7 “ಹುಬ್ಬಳ್ಳಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ದಂಧೆ” ಎಂಬ ಶೀರ್ಷಿಕೆ ಅಡಿಯಲ್ಲಿ ಸವಿಸ್ತಾರವಾದ ಸುದ್ದಿ ಬಿತ್ತರಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಲಾಗಿತ್ತು.
ಇದೀಗ ಅಕ್ರಮ ದಂಧೆಯ ಕುರಿತು Etv24×7 ಮತ್ತಷ್ಟು ಮಾಹಿತಿಯನ್ನು ಹುಡುಕುತ್ತಾ ಹೋದಂತೆ ದಂಧೆ ಆಳ ಬಗೆದಷ್ಟು ಕರಳವಾಗುತ್ತಾ ಸಾಗಿದೆ.
ಹೌದು, ಮೊದಲೇ ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಸುತ್ತಮುತ್ತ ಅಭಿವೃದ್ಧಿ ನಿರ್ಮಾಣ ಕಾಮಗಾರಿಗಳು, ಮನೆ, ಕಟ್ಟಡ ನಿರ್ಮಾಣ ಭರದಿಂದ ಸಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮರಳು ದಂಧೆಕೋರರು ರಾತ್ರಿ-ಹಗಲು ಎನ್ನದೇ ಯಾರ ಭಯವಿಲ್ಲದೇ ಟಿಪ್ಪರ್ ಲಾರಿಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಮರಳು ಸಾಗಿಸುತ್ತಿದ್ದಾರೆ.
ಹಾಗಿದ್ರೆ ದಂಧೆಕೋರರ ಬೆನ್ನೆಲುಬಾಗಿ ನಿಂತವರು ಯಾರು? ಪ್ರತಿನಿತ್ಯ ನಗರಕ್ಕೆ ಎಷ್ಟು ವಾಹನಗಳು ಎಂಟ್ರಿ ಆಗುತ್ತೆ? ಇವುಗಳನ್ನು ಯಾರು ಯಾರು ನೋಡಿಕೊಳ್ಳತ್ತಾರೆ? ಆನೆ ಮೇಲೆ ಕುಬೇರನ ಜೊತೆಗೆ ಮೈತ್ರಿಮಾಡಿಕೊಂಡು ಹುಬ್ಬಳ್ಳಿಯ ತ್ರಿವೇಣಿ ಸಂಗಮದಲ್ಲಿ ಲಾರಿಗೆ ಇಂತಿಷ್ಟು ಅಂತಾ ಯಾರು ಫಿಕ್ಸ್ ಮಾಡಿದ್ದಾರೆ ? ಫಿಕ್ಸ್ ಮಾಡಿದ ಪ್ರಸಾದ್ ಯಾರಿಂದ ಯಾರಿಗೆ ಹೋಗುತ್ತೆ?
ಹಾಗೇಯೇ ಗ್ರಾಮೀಣದಲ್ಲಿ ಲಾರಿಗಳಿಗೆ ಟಾರ್ಚ್ ಬಿಟ್ಟು ಕಳಿಸೋರು ಯಾರು? ಅದಕ್ಕೂ ಮುಖ್ಯವಾಗಿ ಕಾಶ್ಮೀರ ಬಿಟ್ಟು ಹಡಗಲಿಯ ಹಾದಿಯ ಮೂಲಕ ದಂಧೆಗೆ ಸರಳ ದಾರಿ ಮಾಡಿಕೊಟ್ಟವರು ಯಾರು? ಎಂಬ ಇತ್ಯಾದಿ ಮಾಹಿತಿಯನ್ನು ಅಧಿಕೃತ ಮಾಹಿತಿಗಳ ಸಮೇತವಾಗಿ ಮುಂದಿನ ಸುದ್ದಿಯಲ್ಲಿ ಪ್ರಕಟಿಸಲಿದೆ ನಿರೀಕ್ಷಿಸಿ….
ಇದು Etv24×7 ವಾಹಿನಿಯ ಮರಳು ದಂಧೆಯ inside story….