ಪತ್ನಿ ಕೊಲೆ ಮಾಡಿ, ನೇಣಿಗೆ ಶರಣಾದ ಪತಿ..

ಹೆಂಡತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಹೆಂಡತಿ ಶವದ ಪಕ್ಕದಲ್ಲಿಯೇ ಪತಿಯು ನೇಣಿಗೆ ಶರಣಾದ ಘಟನೆ ಹಳೇ ಹುಬ್ಬಳ್ಳಿಯ ನಡೆದಿದೆ.
ಕಟಕರ ಓಣಿಯ ನಿವಾಸಿಯಾದ ಮಲ್ಲಿಕ್ ಇಂದು ಮಧ್ಯಾಹ್ನ ತನ್ನ ಹೆಂಡತಿಯ ಜೊತೆ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಆಕೆಯ ಮೇಲೆ ಮಾರಕಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕೊಲೆಯ ನಂತರ ತಾನು ಅದೇ ಜಾಗದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಪತಿಯು ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ಹಲವು ತಿಂಗಳಿಂದ ಗಂಡ, ಹೆಂಡತಿ ನಡುವೇ ಜಗಳ ನಡೆಯುತ್ತಿತ್ತು. ಆದ್ರೆ ಆ ಜಗಳ ಇಂದು ವಿಕೋಪಕ್ಕೆ ತಿರುಗಿ ಇಬ್ಬರ ಸಾವಿನಲ್ಲಿ ಅಂತ್ಯಗೊಂಡಿದ್ದಾರೆ.
ಇನ್ನು ಸ್ಥಳಕ್ಕೆ ಆಗಮಿಸಿದ ಕಸಬಾಪೇಟ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಬಿಸಿದ್ದಾರೆ.