ನವಲಗುಂದದಲ್ಲಿ ಉದ್ಯಮ ಕ್ರಾಂತಿ… ನಿರುದ್ಯೋಗಿಗಳಿಗೆ ಆಶಾದೀಪ್ “ಎಸ್ ಪಿ ಫೌಂಡೇಶನ್”

ಜನರ ಜೀವನ ಸುಗಮಗೊಳಿಸಲು ಎಸ್.ಪಿ.ಫೌಂಡೇಷನ್ ನವಲಗುಂದ ಪಟ್ಟಣದಲ್ಲಿ ಶನಿವಾರ ನಡೆಸಲಿರುವ ಉದ್ಯೋಗ ಮೇಳದ “ಜರ್ಸಿ”ಯನ್ನ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು.
50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿ, 2500 ಕ್ಕೂ ಹೆಚ್ಚು ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಎಸ್.ಪಿ.ಫೌಂಡೇಷನ್ ಉದ್ಯೋಗ ಮೇಳವನ್ನ ಹಮ್ಮಿಕೊಂಡಿದ್ದು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಹಕಾರ ನೀಡಿದೆ.
ನವಲಗುಂದ ಕ್ಷೇತ್ರದ ಜೊತೆ ಯಾವುದೇ ಭಾಗದ ನಿರುದ್ಯೋಗಿಗಳು ಮೇಳದ ಪ್ರಯೋಜನ ಪಡೆಯಬೇಕೆಂದು ಫೌಂಡೇಷನ್ ಮನವಿ ಮಾಡಿದೆ.
ರಾಜಶೇಖರ ಕಂಪ್ಲಿ, ಸದಾನಂದ ಗಾಳಪ್ಪನವರ, ರೋಹಿತ ಮತ್ತಿಹಳ್ಳಿ, ಪ್ರಭು ಬುಳಗಣ್ಣನವರ, ಮುತ್ತು ಚಾಕಲಬ್ಬಿ, ರವಿಚಂದ್ರನ್ ಹುಬ್ಬಳ್ಳಿ, ಗಂಗಾಧರ ದುಂದೂರ, ವೀರೇಶ ಮಡಿವಾಳರ ಉಪಸ್ಥಿತರಿದ್ದರು.