ವಿದ್ಯಾನಗರ ಪೊಲೀಸರ ಭರ್ಜರಿ ಭೇಟೆ ಲಕ್ಷಾಂತರ ಮೌಲ್ಯದ ಸ್ಪಿರಿಟ್ ಸಮೇತ ನಾಲ್ಕು ಜನರ ಬಂಧನ.

ವಿದ್ಯಾನಗರ ಪೊಲೀಸರು ಇಂದು ಹುಬ್ಬಳ್ಳಿ ಉಣಕಲ್ ಟಿಂಬರ್ ಯಾರ್ಡ ಹತ್ತಿರ ಅಕ್ರಮವಾಗಿ ೪೬೦ ಲೀಟರ ಸ್ಪಿರಿಟ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನಾಲ್ಕು ಜನ ಆರೋಪಿಗಳ ಸಮೇತ ೧೭ ಪ್ಲಾಸ್ಟಿಕ್ ಕ್ಯಾನುಗಳಲ್ಲಿ ಸುಮಾರು ೬೦.೫೦೦ ಮೌಲ್ಯದ ೪೬೦ ಲೀಟರ ಸ್ಪಿರಿಟ ಸಮೇತವಾಗಿ ಸುಮಾರು ೩.೫೦.೦೦೦ಮೌಲ್ಯದ ಕಾರು ಹಾಗು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಆರೋಪಿತರಾದ 1) ಸುನೀಲ್ ತಂದೆ ಶಂಕರ ಬಳ್ಳಾರಿ. 2) ಯಲ್ಲಪ್ಪ ತಂದೆ ಜ್ಞಾನೇಶ್ವರ ಹಬೀಬ. 3) ಮಹ್ಮದಅಜೀಜ ತಂದೆ ಸಯ್ಯದಇಸಾಕ ಬೇಪಾರಿ, 4) ಮುಬಾರಕ ತಂದೆ ಖಾದರಸಾಬ ಬಸರಿ . ಇನ್ನು ಪ್ರಕರಣ ದಾಖಲಿಸಿಕೊಂಡ ವಿದ್ಯಾನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ .

ಪೊಲೀಸ್ ಆಯುಕ್ತರಾದ ಶ್ರೀಮತಿ ರೇಣುಕಾ ಕೆ. ಸುಕುಮಾರ,ಹಾಗೂ ಶ್ರೀ ಎಮ್ ರಾಜೀವ, ಉಪ ಪೊಲೀಸ್ ಆಯುಕ್ತರು ಹಾಗೂ ರವೀಶ ಸಿ. ಆರ್ ಉಪ ಪೊಲೀಸ್ ಆಯುಕ್ತರು ಮತ್ತು ಹುಬ್ಬಳ್ಳಿ ಉತ್ತರ ಉಪ ವಿಭಾಗದ ಎ.ಸಿ.ಪಿ ರವರಾದ ಶಿವಪ್ರಕಾಶ ನಾಯಕ ಇವರ ಮಾರ್ಗದರ್ಶನದಲ್ಲಿ

ವಿದ್ಯಾನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಜಯಂತ ಗೌಳಿ ಇವರ ನೇತೃತ್ವದಲ್ಲಿ ಶ್ರೀಮಂತ ಹುಣಸಿಕಟ್ಟಿ ಪಿ.ಎಸ್.ಐ ಮತ್ತು ಸಿಬ್ಬಂದಿ ಜನರಾದ ಎಮ್.ಬಿ.ಧನಿಗೊಂಡ, ಶಿವಾನಂದ ತಿರಕಣ್ಣವರ, ಪಿ.ಬಿ.ಹಿರಗಣ್ಣವರ. ಎಮ್.ವಾಯ್.ಯಕ್ಕಡಿ, ವಿ.ಆರ್.ಸುರವೆ, ಮಂಜುನಾಥ ಏಣಗಿ, ಎಸ್. ಎಚ್. ತಹಶೀಲ್ದಾರ, ರಮೇಶ ಹಲ್ಲೆ, ಶರಣಗೌಡ ಮೂಲಿಮನಿ ಈ ಒಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲರನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.