ನೇಹಾ ಹಿರೇಮಠ ಕಗ್ಗೊಲೆಗೆ ವೀರಶೈವ ಲಿಂಗಾಯತ ಸಮುದಾಯದಿಂದ ಖಂಡನೆ

ನಿನ್ನೆ ದಿನಾಂಕ 18-4-2024 ರಂದು ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜ್ ವಿಧ್ಯಾರ್ಥಿನಿ ಕುಮಾರಿ ನೇಹಾ ಹಿರೇಮಠ ಇವಳನ್ನು ಅಮಾನುಷ ವಾಗಿ ಕೊಲೆಗೈದ ಕ್ರೊರಿ ಫಯಾಜ್ ಸವದತ್ತಿ ಎಂಬ ಕೊಲೆಗಾರನಿಗೆ ಯಾವುದೇ ಕಾರಣಕ್ಕೂ ನ್ಯಾಯಾಲಯ ಜಾಮೀನು ನೀಡಿದೆ ಗಲ್ಲುಶಿಕ್ಷೆ ಗೆ ಗುರುಪಡಿಸ ಬೇಕು ಎಂದು ವೀರಶೈವ ಲಿಂಗಾಯತ ಒಳ ಪಂಗಡಗಳ ಒಕ್ಕೂಟ ಆಗ್ರಹಿಸಿಸುತ್ತದೆ

ಮತ್ತು ಈ ರೀತಿ ಕೃತ್ಯಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಕಾಲೇಜ್ ಗಳ ಸುತಮುತ್ತ ಇರುವ ಮಾದಕ ವಸ್ತುಗಳ ಪೂರೈಕೆ ಕೇಂದ್ರಗಳ ವಿರುದ್ಧ ಕೊಡಲೇ ನೀರಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.
ಈಗಾಗಲೇ ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ನಿರಂಜನ ಹಿರೇಮಠರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ವೀರಶೈವ ಲಿಂಗಾಯತ ಸಮುದಾಯ ನಿಮ್ಮ ಬೆನ್ನಿಗೆಯಿರುತ್ತದೆ ಮಗಳ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಮತ್ತು ಈ ಘಟನೆ ಇಟ್ಟು ಕೊಂಡು ಸತ್ತ ಹೆಣದ ಮೇಲೆ ರಾಜಕೀಯ ಮಾಡುವ ಕೀಳು ಮಟ್ಟಕ್ಕೆ ಯಾವುದೇ ರಾಜಕೀಯ ಪಕ್ಷಗಳು ಇಳಿಯಬಾರದು ಎಂದು ವೀರಶೈವ ಲಿಂಗಾಯತ ಒಳ ಪಂಗಡಗಳ ಒಕ್ಕೂಟದ ಪದಾಧಿಕಾರಿಗಳಾದ ಬಂಗಾರೇಶ ಹಿರೇಮಠ ಆಗ್ರಹಿಸಿದರು ಇನ್ನು ಈ ಒಂದು ಸಂದರ್ಭದಲ್ಲಿ ರಾಜಶೇಖರ ಮೆಣಸಿನಕಾಯಿ , ಪ್ರಕಾಶಗೌಡ ಪಾಟೀಲ್ , ಸುರೇಶ ಸವಣೂರ , ವೀರಣ್ಣಾ ಹಿರೇಹಾಳ, ಮಂಜುನಾಥ ಲುತಿಮಠ , ಬಸವರಾಜ ಮೆಣಸಗಿ ,ರವಿ ಸಿದ್ಧಾಟಗಿಮಠ ,ಅಪ್ಪಣ್ಣ ಕಮ್ಮಾರ , ಎಂ ಪಿ ಶಿವಕುಮಾರ , ಮಹಾಂತೇಶ ಮಠದ ,ಹೇಮಲತಾ ಶಿವಮಠ , ಶರ್ಮಾ ಹಿರೇಮಠ , ಪ್ರಶಾಂತ ಮೇಲಿನಮನಿ ಉಪಸ್ಥಿತರಿದ್ದರು