ಗಾಂಜಾ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿ ಸಹಿತ ಇಬ್ಬರ ಬಂಧನ

ಹಳೇ ಹುಬ್ಬಳ್ಳಿಯ ತಿಮ್ಮಸಾಗರ ಹೈವೆ ರಿಂಗ ರಸ್ತೆಯ ಪಕ್ಕ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಹಳೆ ಹುಬ್ಬಳ್ಳಿಯ ಪೊಲೀಸರು ದಾಳಿ ನಡೆಸಿ ಮೂರು ಜನ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ. ಬಂಧಿತರಿಂದ 3 ಕೆಜಿ 436 ಗ್ರಾಂ ಗಾಂಜಾ ಇದ್ದ ಪೇಪರಿನಲ್ಲಿ ಸುತ್ತಿದ ಗಾಂಜಾ ಬಂಡಲನ್ನು ಹಾಗು ಆಟೊ ರಿಕ್ಷಾ ಮತ್ತು ಬೈಕ ಸಮೇತವಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಹಳೇ ಹುಬ್ಬಳಿಯ ಮಾರುತಿ ನಗರದ ರೆಹಮತ ಧಾರವಾಡ. ಮಾರುತಿ ನಗರದ ತೌಪೀಕ ಸುದರ್ಜಿ . ಬಸವನ ನಗರದ ಗೂರದಿಂದ್ರ ಸಿಂಗ ಬಂಧಿತರು ಇವರಿಂದ ಸುಮಾರು 30 ಸಾವಿರಕ್ಕು ಹೆಚ್ಚು ಮೌಲ್ಯದ ಗಾಂಜಾ ಹಾಗು ಆಟೊ ರಿಕ್ಷಾ .ಒಂದು ಬೈಕ ವಶಪಡಿಸಿಕೊಂಡು.ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ

ಇನ್ನು ಈ ಪ್ರಕರಣವನ್ನು ಪೊಲೀಸ್ ಆಯುಕ್ತರದ ಲಾಬೂರಾಮ್ ಇವರ ನೇತೃತ್ವದಲ್ಲಿ ಡಿಸಿಪಿಗಳಾದ ಸಾಹಿಲ ಬಾಗ್ಲಾ .ಗೋಪಾಲ ಎಮ್ ಬ್ಯಾಕೋಡ .ಎಸಿಪಿ ಆರ್ ಕೆ ಪಾಟೀಲರ ಮಾರ್ಗದರ್ಶನದಲ್ಲಿ ಹಳೆ ಹುಬ್ಬಳ್ಳಿಯ ಠಾಣೆಯ ಇನ್ಸಪೆಕ್ಟರ ಆದ ಎ ಜಿ ಚವ್ಹಾಣ ಇವರ ನೇತೃತ್ವದಲ್ಲಿ ಪಿಎಸಐ ಶಿವಾನಂದ ಬನ್ನಿಕೊಪ್ಪಾ ಹಾಗು ಎಪ್ ಎಸ್ ಭಜಂತ್ರಿ .ಎ ಎಸ ಐ ಕಾಳೆ . ಹುಬ್ಬಳ್ಲಿ.ಹಾಗು ಸಿಬ್ಬಂದಿಗಳಾದ ಸುನೀಲ್ ಪಾಂಡೆ. ಎ ಬಿ ಕಟ್ನಳ್ಳಿ. ಐ ಎಸ್ ಸಂಶಿ. ಎಮ್ ಎಪ್ ನಧಾಪ . ಉಮೇಶ್ ಹುದ್ದೆರಿ. ನಾಗರಾಜ ಕೆಂಚಣ್ಣವರ್. ಎಚ್ ಎಸ್ ಕೊರವರ. ಎಸ್ ಎ ವಲ್ಯಾಪೂರ.ವಿ ಡಿ ಹೊಸಗೌಡ್ರ. ಎಮ್ ಎನ್ ಹೊಳಲಾಪೊರ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದ ಎಲ್ಲಾ ಸಿಬ್ಬಂದಿಯ ಕಾರ್ಯವೈಖರಿಯನ್ನು ಮೆಚ್ಚಿ ಪೊಲೀಸ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.