ಕ್ಷೇತ್ರದಲ್ಲಿ ಬಿರುಸಿನ ಪ್ರಚಾರಕ್ಕೀಳಿದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ನವಲಗುಂದ: ಸಮಗ್ರ ಧಾರವಾಡ ಜಿಲ್ಲೆಯ ಅಭಿವೃದ್ಧಿಯ ಜೊತೆಗೆ ದೇಶದ ಭದ್ರತೆಯನ್ನ ಸ್ಮರಿಸಿಕೊಂಡು ಬಿಜೆಪಿಗೆ ಮತ ನೀಡಿ ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.

ನವಲಗುಂದ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿರುವ ಮಾಜಿ ಸಚಿವರು, ಖನ್ನೂರ, ಬೋಗಾನೂರ, ನಾಯ್ಕನೂರ, ಕೊಂಗವಾಡ, ತಡಹಾಳ ಹಾಗೂ ಆರಟ್ಟಿ ಗ್ರಾಮದಲ್ಲಿ ಪ್ರಲ್ಹಾದ ಜೋಶಿಯವರ ಪರವಾಗಿ ಮತಯಾಚನೆ ಮಾಡಿದರು.

ಬಿಜೆಪಿಯ ತಾಲ್ಲೂಕು ಅಧ್ಯಕ್ಷ ಶರಣಪ್ಪಗೌಡ ದಾನಪ್ಪಗೌಡ್ರ, ಷಣ್ಮುಖ ಗುರಿಕಾರ, ಸಿದ್ದಣ್ಣ ಕಿಟಗೇರಿ, ರಾಜುಗೌಡ ಗೌಡಪ್ಪಗೌಡ್ರ, ಫಕ್ಕೀರಪ್ಪ ಜಕ್ಕಪ್ಪನವರ, ಮಲ್ಲಪ್ಪ ಕುಲಕರ್ಣಿ, ನೀಲಕಂಠಗೌಡ್ರ ಪಾಟೀಲ, ನಂದಿಕೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.