Uncategorized

ಚನ್ನಮ್ಮಾ ಸರ್ಕಲ ಲಾಡ್ಜಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿವೆಯಾ? ಅಯ್ಯೋ ಶಿವ ಶಿವಾ……..

ಹುಬ್ಬಳ್ಳಿ ನಗರದ ಕೆಲವೊಂದು ಲಾಡ್ಜ್’ಗಳಲ್ಲಿ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ, ಇಷ್ಟಾದರೂ ಕೂಡಾ ಖಾಕಿ ಗಪ್ಪುಚುಪ್ಪಾಗಿದೆ. ಇದೀಗ ನಾವು ಹೇಳುತ್ತಿರುವ ಸುದ್ದಿ ಇಡೀ ಸಮಾಜವೇ ಒಂದು ಸಾರಿ ಗಮನಿಸಬೇಕಿದೆ. ಮಕ್ಕಳನ್ನು ಹೆತ್ತು ಹೊತ್ತು, ಅವರ ಮೇಲೆ ಅಪಾರವಾದ ಕನಸು ಕಂಡಿರುವ ಪೋಷಕರು ಈ ಸುದ್ದಿಯನ್ನು ನೋಡಲೇಬೇಕಿದೆ.

ಹುಬ್ಬಳ್ಳಿಯಲ್ಲಿಗ ಏನೂ ಅರಿಯದ ಹರಿಹರಿಯದ ವಯಸ್ಸಿನ ಹುಡುಗ-ಹುಡುಗಿಯರು ದಾರಿತಪ್ಪಿಸುವ ಕೆಲಸ ಜೋರಾಗಿ ಚನ್ನಮ್ಮಾ ವೃತದ ಬಳಿ ಇರುವ ಕೆಲವೊಂದು ಲಾಡ್ಜಗಳಲ್ಲಿ ಜೋರಾಗಿ ನಡೆಯುತ್ತಿವೆ.

ಆಧುನಿಕ ಜಗತ್ತು ಅತಿವೇಗವಾಗಿ ಸಾಗುತ್ತಿದೆ. ಈ ವೇಳೆ ನಮ್ಮ ಸಂಪ್ರದಾಯ, ಸಂಸ್ಕೃತಿ ಎಲ್ಲವೂ ಅವಸಾಗಿನತ್ತ ಸಾಗುತ್ತಿದೆ. ಎಲ್ಲವೂ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ಪ್ರೀತಿ, ಪ್ರೇಮ, ಪಯಣ ಎಂಬ ಮಾತುಗಳು ಎಲ್ಲೆಡೆ ಸದ್ದು ಮಾಡುತ್ತಿವೆ.

ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿರುವ ಲಾಡ್ಜ್ ಮಾಲೀಕರು ಅರಿಯದ ಹುಡುಗ-ಹುಡುಗಿಯರಿಗೆ ಲಾಭದ ಆಸೆಗೆ ಬಿದ್ದು ರೂಮ್ ಕೊಟ್ಟು, ವಿದ್ಯಾರ್ಥಿಗಳ ಜೀವನವನ್ನು ಸಣ್ಣ ವಯಸ್ಸಿನಲ್ಲಿಯೇ ಹಾಳು ಮಾಡುವ ಕೆಲಸ ಮಾಡಲಾಗುತ್ತಿದೆ. ಇದನ್ನು ತಡೆಯಬೇಕಿದ್ದ ಖಾಕಿ ಕೂಡಾ ಜಾವಮೌನ ವಹಿಸಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಹೀಗಾಗಿ ಸಭ್ಯ ಸಮಾಜದ ಜನತೆ ಮಕ್ಕಳು ಹಾಳಾಗುತ್ತಿರುವುದನ್ನು ನೋಡಿ ಈ ಬಗ್ಗೆ ಮಾಹಿತಿ ಕೊಟ್ಟು, ಬೆಳಕಿಗೆ ತರುವ ಕೆಲಸಕ್ಕೆ ಮುಂದಾಗಿ ಎಂದು ಹೇಳಿದರು.

ಅದರಂತೆ ನಿಮ್ಮ ಪಬ್ಲಿಕ್ ಸಿಲ್ವರ್ ತಂಡ ಕಾರ್ಯಾಚರಣೆಗೆ ಇಳಿದಿದ್ದು, ಈ ವೇಳೆ ಬೆಚ್ಚಿಬೀಳುವ ಅನೇಕ ಸಂಗತಿಗಳು ಗೊತ್ತಾಗಿವೆ. ಕೋರ್ಟ್ ಆದೇಶವನ್ನು ದಿಕ್ಕರಿಸಿ ಲಾಭದ ಆಸೆಗೆ ಹೇಗೆ ಯುವಕ-ಯುವತಿಯರ ಜೀವನದಲ್ಲಿ ದೇವರುಗಳ ಹೆಸರನ್ನು ಇಟ್ಟುಕೊಂಡಿರುವ ಲಾಡ್ಜ್’ಗಳು ಮಾಲೀಕರು ಹೇಗೆಲ್ಲಾ ಚೆಲ್ಲಾಟ ಆಡುತ್ತಿದ್ದಾರೆ ಎಂಬ ಸಂಗತಿಗಳು ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

error: Content is protected !!